ಸಾರಾಂಶ
ಕನ್ನಡಪ್ರಭ ವಾರ್ತೆ ಕೋಟ
ಇಲ್ಲಿನ ಗಿಳಿಯಾರು ಗ್ರಾಮದ ಹರ್ತಟ್ಟುವಿನ ಶ್ರೀ ಮಹಾಲಿಂಗೇಶ್ವರ ದೇಗುಲದ ದ್ವಿತೀಯ ವರ್ಷದ ವರ್ಧಂತಿ ಉತ್ಸವ ವೈಭವದಿಂದ ನಡೆಯಿತು.ದೇಗುಲದ ಪ್ರಧಾನ ಅರ್ಚಕ ಸುಧೀರ್ ಐತಾಳ್ ನೇತೃತ್ವದಲ್ಲಿ ದೇವರಿಗೆ ನವಕ ಪ್ರಧಾನ ದ್ರವ್ಯ ಕಲಶಾಭಿಷೇಕ, ಸ್ನಪನಾಧಿವಾಸ ಹೋಮ, ಶ್ರೀಷ್ಟೋಪಮಂತ್ರ, ಮಹಾಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಕೋಟದ ಪಂಚವರ್ಣ ಮಹಿಳಾ ಭಜನಾ ತಂಡ ಮತ್ತು ಸಾಲಿಗ್ರಾಮ ವಿಪ್ರ ಮಹಿಳಾ ವಲಯಗಳ ಸದಸ್ಯರಿಂದ ಭಜನಾ ಕಾರ್ಯಕ್ರಮಗಳು, ರಾತ್ರಿ ಮಹಾರಂಗಪೂಜೆ, ದೇಗುಲದಲ್ಲಿ ಬೊಬ್ಬರ್ಯ ದೇವರ ದರ್ಶನ ಸೇವೆ, ನಾಗ ಸಾನ್ನಿಧ್ಯಕ್ಕೆ ವಿಶೇಷ ಪೂಜೆ ಇತ್ಯಾದಿ ಕಾರ್ಯಕ್ರಮಗಳು ನೆರವೇರಿದವು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತು ಅಂಬಿಕಾ ಎಸ್. ಗಾಣಿಗ ಈ ಧಾರ್ಮಿಕ ವಿಧಿವಿಧಾನದಲ್ಲಿ ಭಾಗಿಯಾದರು.ಈ ಸಂದರ್ಭ ದೇಗುಲದ ಆಡಳಿತ ಮಂಡಳಿ ಕಾರ್ಯದರ್ಶಿ ಹರೀಶ್ ದೇವಾಡಿಗ, ಪ್ರಮುಖರಾದ ಗೋಪಾಲಕೃಷ್ಣ ಮಯ್ಯ, ಚಂದ್ರಿಕಾ ಭಟ್, ಸಿದ್ಧ ದೇವಾಡಿಗ, ಶೇಖರ್ ದೇವಾಡಿಗ, ತಿಮ್ಮ ಕಾಂಚನ್, ಶೇವಧಿ ನಾಗರಾಜ್ ಗಾಣಿಗ, ಸಂತೋಷ್ ಪೂಜಾರಿ, ರಾಜು ಪೂಜಾರಿ ಹೋಬಳಿಮನೆ, ಗಿರೀಶ್ ದೇವಾಡಿಗ, ಬಾಬು ಶೆಟ್ಟಿ, ಚಂದ್ರ ಹಾಡಿಕೆರೆ, ಶಾಂತಾ ಪ್ರಕಾಶ್, ಸಂತೋಷ್ ದೇವಾಡಿಗ, ಕೀರ್ತೀಶ್ ಪೂಜಾರಿ, ಪ್ರದೀಪ್ ದೇವಾಡಿಗ, ಆದರ್ಶ ಶೆಟ್ಟಿ ಮತ್ತಿತರರು ಇದ್ದರು.