ಸಾರಾಂಶ
ಮಾಗಡಿ : ಎರಡನೇ ವರ್ಷದ ಹಿಂದೂ ಮಹಾ ಗಣಪತಿ ಗಣೇಶೋತ್ಸವ ಸೆ. 11 ರಿಂದ 15 ರವರೆಗೆ ವಿಜೃಂಭಣೆಯಿಂದ ಆಚರಿಸಲು ಸಕಲ ರೀತಿ ತಯಾರಿ ನಡೆಯುತ್ತಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿ ಇಂದ ಎರಡನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ ಕಾರ್ಯಕ್ರಮಕ್ಕೆ ಗಣೇಶ ಚತುರ್ಥಿ ದಿನ ವೇದಿಕೆ ಹಾಕಲು ಸದಸ್ಯರೆಲ್ಲರೂ ಸೇರಿ ಭೂಮಿ ಪೂಜೆ ನೆರವೇರಿಸಿದರು. ಪಟ್ಟಣದ ಡೂಮ್ ಲೈಟ್ ವೃತ್ತದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದು ಒಂದನೇ ದಿನ ನವರಾತ್ರಿ ಆರಾಧನೆ ನಡೆಯಲಿದ್ದು ಕೋಟೆ ಮಾರಮ್ಮ, ಹುಲಿಯೂರುದುರ್ಗಹಳೆಯೂರಮ್ಮ, ತಿರುಮಲೆ ಚೌಡೇಶ್ವರಿ, ಹೊಸಪೇಟೆ ಬಿಸಿಲು ಮಾರಮ್ಮ, ಜ್ಯೋತಿನಗರದ ಅಣ್ಣಮ್ಮ, ಕರಗದ ಹಳ್ಳಿ ಕಾಳಘಟ್ಟಮ್ಮ ದೇವಿಯ ಆರಾಧನೆ ನಡೆಯಲಿದ್ದು ಒಂದೇ ವೇದಿಕೆಯಲ್ಲಿ ನವ ದುಗರ್ೆಯರ ವಿಶೇಷ ಆರಾಧನಾ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನವದುಗರ್ೆ ಯರಿಗೆ ಭಕ್ತರು ಪೂಜೆ ಮಡಿಲಕ್ಕಿ ಸೇವೆ, ಅಕ್ಕಿ-ಬೆಲ್ಲ, ಕುಂಕುಮ, ಬಾಗಿನ ಅರ್ಪಿಸಬಹುದಾಗಿದೆ. ಸೆ.11 ರಂದು ಬುದುವಾರ ಬೆಳಗ್ಗೆ 10 ಗಂಟೆಗೆ ಗಣಪತಿ ಮೂತರ್ಿ ಪ್ರತಿಷ್ಠಾಪನೆ ಬೆಳಗ್ಗೆ 10.30 ಕ್ಕೆ ಮಹಾ ಗಣಪತಿ ಹೋಮ ಸಂಜೆ ಮಾತೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಆರು ಗಂಟೆಗೆ ಲಾಸ್ಟ್ ಇಯರ್ ತಂಡದಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಎರಡನೇ ದಿನ ಗುರುವಾರ ಸಂಜೆ ಗಣಪತಿಗೆ 108 ಗ್ರಾಮಗಳಿಂದ 108 ರೀತಿಯ ವಿಶೇಷ ನೈವೇದ್ಯ ಮತ್ತು ಪ್ರಸಾದ ವಿತರಣೆ ನಡೆಯಲಿದ್ದು ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೂರನೇ ದಿನ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಭಗತ್ ಸಿಂಗ್ ಕರಾಟೆ ಅಕಾಡೆಮಿ ವತಿಯಿಂದ ಚಿರಠ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದ್ದು ಸಂಜೆ 6 ಗಂಟೆಗೆ ದೀಪದೂತ ಅಲಂಕಾರ ನಡೆಯಲಿದ್ದು ಕೇರಳದ ಪ್ರಸಿದ್ಧ ದೀಪ ಅಲಂಕಾರ ತಂಡದಿಂದ ದೀಪೋತ್ಸವ ಕಾರ್ಯಕ್ರಮ ವಿಶೇಷವಾಗಿ ನಡೆಯಲಿದೆ. ನಾಲ್ಕನೇ ದಿನ ಶನಿವಾರ ಮ್ಯೂಸಿಕಲ್ ನೈಟ್ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಐದನೇ ದಿನ ಬೆಳಗ್ಗೆ 9 ಗಂಟೆಗೆ ಅನ್ನಸಂತರ್ಪಣೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು ಪಟ್ಟಣದ ರಾಜಭೀದಿಗಳಲ್ಲಿ ಬಾಣ ಬಿರುಸು ಸಿಡಿಮದ್ದುಗಳೊಂದಿಗೆ ಮಂಗಳೂರಿನ ಪ್ರಸಿದ್ಧ ತಂಡದಿಂದ ತ್ರಿಶೂಲ್ ನಾಸಿಕ್ ಡೋಲು, ಡಿಜೆ ಮ್ಯೂಸಿಕ್ ಜೊತೆಗೆ ಬೃಹತ್ ಶೋಭಯಾತ್ರೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಾರ್ವಜನಿಕ ವಿನಾಯಕ ಗಣೇಶೋತ್ಸವ ಸಮಿತಿ ಮನವಿ ಮಾಡಿದ.