ಸಾರಾಂಶ
ಕರಗ ಉತ್ಸವದ ಎರಡನೇ ದಿನವಾದ ಮಂಗಳವಾರ ಅರ್ಚಕ ಜ್ಞಾನೇಂದ್ರ ಅವರು ಗಣಾಚಾರಿಗಳು, ಗಂಟೆ ಪೂಜಾರಿ ಹಾಗೂ ವೀರಕುಮಾರರ ಸಹಿತ ಕಬ್ಬನ್ ಉದ್ಯಾನದಲ್ಲಿರುವ ಕರಗದ ಕುಂಟೆಯಲ್ಲಿ ಗಂಗೆ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರಗ ಉತ್ಸವದ ಎರಡನೇ ದಿನವಾದ ಮಂಗಳವಾರ ಅರ್ಚಕ ಜ್ಞಾನೇಂದ್ರ ಅವರು ಗಣಾಚಾರಿಗಳು, ಗಂಟೆ ಪೂಜಾರಿ ಹಾಗೂ ವೀರಕುಮಾರರ ಸಹಿತ ಕಬ್ಬನ್ ಉದ್ಯಾನದಲ್ಲಿರುವ ಕರಗದ ಕುಂಟೆಯಲ್ಲಿ ಗಂಗೆ ಪೂಜೆ ನೆರವೇರಿಸಿದರು. ಬಳಿಕ ಶ್ರೀ ಧರ್ಮರಾಯಸ್ವಾಮಿ ದೇವಾಲಯ ತಲುಪಿ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಎಂದಿನಂತೆ ವ್ರತಾಚರಣೆಯಲ್ಲಿ ತೊಡಗಿಕೊಂಡರು. ಸಂಜೆ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಕುಲಸ್ಥರು ಕುಟುಂಬ ಸಮೇತರಾಗಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದರು.ಅಷ್ಟಮಿಯಿಂದ ಏಕಾದಶಿವರೆಗೂ ದೇವಾಲಯದಲ್ಲಿ ನಿತ್ಯ ವಿಶೇಷ ಪೂಜೆ ಮಹಾಮಂಗಳಾರತಿ ನಡೆಯಲಿದ್ದು, ಬುಧವಾರ ಸಂಪಂಗಿ ಕರೆ ಸೇರಿದಂತೆ ಒಂಬತ್ತು ದಿನಗಳ ಕಾಲ ಒಂಬತ್ತು ದಿಕ್ಕುಗಳಲ್ಲಿ ಗಂಗೆ ಪೂಜೆ ನಡೆಸಲಾಗುವುದು.