ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದಲ್ಲಿ ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಕೆರೆ ಬಯಲು ಪ್ರದೇಶದಲ್ಲಿ ಭೂಮಿ ಪೂಜೆ ನೆರವೇರಿಸಿದರು.ಪಟ್ಟಣದಲ್ಲಿ 2006-07 ನೇ ಸಾಲಿನಲ್ಲೇ ಒಳಚರಂಡಿ ಆಗಿದ್ದರೂ ಸಹ ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಬಳಕೆಗೆ ಅನುಕೂಲವಾಗಿರಲಿಲ್ಲ. ಅಲ್ಲಲ್ಲಿ ನಿರ್ಮಾಣ ಮಾಡಲಾಗಿದ್ದ ಮಿನಿ ಸೆಪ್ಟಿಕ್ ಗಳು ಕುಸಿದು ಬಿದ್ದಿರುವ ಹಾಗೂ ಸಂಪರ್ಕಿಸುವ ಕೊಳವೆಗಳಲ್ಲಿ ಕಷ್ಮಲಗಳು ಕಟ್ಟಿಕೊಂಡಿರುವ ಪರಿಣಾಮವಾಗಿ ಮನೆಗಳಿಂದ ಹೊರಬರುತ್ತಿದ್ದ ಕಷ್ಮಲಗಳು ಸರಾಗವಾಗಿ ಹರಿಯದೇ ತೊಂದರೆಯಾಗಿ ಯೋಜನೆ ಉಪಯೋಗಕ್ಕೆ ಬಾರದಂತಾಗಿತ್ತು. ಈಗ ಎರಡನೇ ಹಂತದ ಒಳಚರಂಡಿ ಕಾಮಗಾರಿಯನ್ನು ಸುಮಾರು 6.5 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಪಟ್ಟಣದ ಎಲ್ಲಾ ಮನೆಗಳಿಂದ ಬರುವ ಕಷ್ಮಲಗಳನ್ನು ಸರಾಗವಾಗಿ ಹರಿಸುವ ಸಲುವಾಗಿ ಕಾಮಗಾರಿ ಮಾಡಲಾಗುತ್ತಿದೆ. ಈಗ ಪ್ರತಿ ಮನೆಗೂ ಯುಜಿಡಿ ಸಂಪರ್ಕ ನೀಡಲಾಗುವುದು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಶಾಸಕರು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಸದಸ್ಯರಾದ ಎನ್. ಆರ್. ಸುರೇಶ್, ಮಧು, ಆಶಾ ರಾಜಶೇಖರ್, ನಾಮಿನಿ ಸದಸ್ಯರಾದ ರುದ್ರೇಶ್, ಶ್ರೀನಿವಾಸ್ ಮೂರ್ತಿ, ಗುತ್ತಿಗೆದಾರರಾದ ಆನಂದ್ ಗೌಡ ಮತ್ತು ರಂಜನ್ ಗೌಡ, ಪಟ್ಟಣ ಪಂಚಾಯಿತಿಯ ಎಇಇ ಹರೀಶ್, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ಹಲವಾರು ಮಂದಿ ಇದ್ದರು. ಜಮೀನುಗಳಿಗೆ ಹರಿಸುವ ಸಂಸ್ಕರಣಗೊಂಡ ನೀರು ಹರಿಸಲು ಅನುಕೂಲವಾಗುವಂತೆ ತಮ್ಮ ಜಮೀನನ್ನು ನೀಡಿ ಯೋಜನೆ ಸಾಕಾರಗೊಳ್ಳಲು ಸಹಕರಿಸಿದ ತಿಮ್ಮಣ್ಣ ನವರನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಈ ಸಂದರ್ಭದಲ್ಲಿ ಗೌರವಿಸಿದರು.