ಬ್ಯಾಡ್ಮಿಂಟನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದ್ವಿತೀಯ ಸ್ಥಾನ

| Published : Nov 15 2024, 12:34 AM IST

ಸಾರಾಂಶ

ಮಳವಳ್ಳಿ ತಾಲೂಕಿನ ಪೂರಿಗಾಲಿ ಪಿಎಲ್‌ಎನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಎಂ.ಎಸ್.ಸೌಜನ್ಯ, ವಿ.ಜೆ.ಕೀರ್ತನಾ, ಅನುಷಾ, ಎಸ್.ರಕ್ಷಿತಾ, ಬಿ.ಶಿಲ್ಪ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಮೈಸೂರು ವಿಶ್ವ ವಿದ್ಯಾಲಯ ಮಾಂಡವ್ಯ ವಲಯ ಮಟ್ಟದ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.

ಮಳವಳ್ಳಿ ತಾಲೂಕಿನ ಪೂರಿಗಾಲಿ ಪಿಎಲ್‌ಎನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಎಂ.ಎಸ್.ಸೌಜನ್ಯ, ವಿ.ಜೆ.ಕೀರ್ತನಾ, ಅನುಷಾ, ಎಸ್.ರಕ್ಷಿತಾ, ಬಿ.ಶಿಲ್ಪ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಮೈಸೂರು ವಿಶ್ವ ವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಮಂಡ್ಯ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ವಿದ್ಯಾರ್ಥಿಗಳ ಸಾಧನೆ ಬಗ್ಗೆ ಪ್ರಾಂಶುಪಾಲ ಆಲಂಗೂರು ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಮಹೇಶ್ ಬಾಬು, ಶಂಕರೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರು, ಸೂಪರಿಂಟೆಂಡೆಂಟ್ ಶಿವಕುಮಾರ್, ಉಪನ್ಯಾಸಕರಾದ ಸೀಮಾ ಕೌಶರ್ ಸೇರಿದಂತೆ ಹಲವರು ಇದ್ದರು.

ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ

ಹಲಗೂರು:

ಗೊಲ್ಲರಹಳ್ಳಿ ದಿವ್ಯಜ್ಯೋತಿ ಶಾಲೆ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಶಾಲೆ ಪ್ರಾಂಶುಪಾಲ ಫಾದರ್‌ ಇಮ್ಯಾನುಯಲ್ ಜಾಕಬ್ ಮಾತನಾಡಿ, ಅ.10ರಂದು ಶಿವಮೊಗ್ಗದಲ್ಲಿ ವರ್ಷಿಣಿ ಯೋಗ ಶಿಕ್ಷಣ - ಸಾಂಸ್ಕೃತಿಕ ಹಾಗೂ ಕ್ರೀಡಾ ಟ್ರಸ್ಟ್‌ ನಡೆಸಿದ 7ನೇ ವರ್ಷದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗಿಯಾಗಿ ವಿವಿಧ ಬಹುಮಾನಗಳನ್ನು ಪಡೆದು ಥೈಲಾಂಡ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿದೆ ಎಂದರು.

ಯೋಗ ತರಬೇತಿದಾರ ಬಾನು ಕುಮಾರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಾದ ಸಾರಿಕ್ ಎಸ್.ಗೌಡ ದ್ವಿತೀಯ ಸ್ಥಾನ ಪಡೆದುಕೊಂಡರೆ, ವೀರೇಶ್ ಡಿ.ಎಸ್ ತೃತೀಯ ಹಾಗೂ ಮಹಾಂತೇಶ್ವರಾ ಗೌಡ (ಚತುರ್ಥಸ್ಥಾನ) ಪಡೆದು ಶಾಲೆಗೆ ಕೀರ್ತಿ ತಂದವರನ್ನು ಅಭಿನಂದಿಸಿ ಗೌರವಿಸಲಾಯಿತು ಎಂದರು.

ಈ ವೇಳೆ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಪಿ.ಪ್ರತೀಪ, ಸಿಸ್ಟರ್ ರಾಣಿ ಮರಿಯಾ ಸೇರಿದಂತೆ ಇತರರು ಇದ್ದರು.14ಕೆಎಂಎನ್ ಡಿ12ಶಿವಮೊಗ್ಗದಲ್ಲಿ ವರ್ಷಿಣಿ ಯೋಗ ಶಿಕ್ಷಣ - ಸಾಂಸ್ಕೃತಿಕ ಹಾಗೂ ಕ್ರೀಡಾ ಟ್ರಸ್ಟ್‌ ನಡೆಸಿದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾದ ಗೊಲ್ಲರಹಳ್ಳಿ ದಿವ್ಯಜ್ಯೋತಿ ಶಾಲೆ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.