ಸಾರಾಂಶ
Second position to Doka Jain School in Science Materials Exhibition
-ಯಾದಗಿರಿ ದೋಕಾ ಜೈನ್ ಶಾಲೆಯ ವರ್ಷಾ, ಪ್ರಿಯಾಂಕಾಗೆ ದ್ವಿತೀಯ ಸ್ಥಾನ
----ಕನ್ನಡಪ್ರಭ ವಾರ್ತೆ ಯಾದಗಿರಿ
ನೈಸರ್ಗಿಕ ಕೃಷಿ ಉತ್ಪನ್ನ ವಿಷಯದಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸಿಬಿಎಸ್‌ಇ ಪಿ.ಎಸ್. ದೋಕಾ ಜೈನ್ ಶಾಲೆಯ ವರ್ಷಾ ಮತ್ತು ಪ್ರಿಯಾಂಕಾ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಸಿಬಿಎಸ್‌ಇ ಬೋರ್ಡ್ ವತಿಯಿಂದ ಬೆಂಗಳೂರಿನ ವೆಂಕಟ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ನ.19 ಮತ್ತು 20ರಂದು ಆಯೋಜಿಸಿದ್ದ 2024-25ನೇ ಸಾಲಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಮರ್ಥನೀಯ ಭವಿಷ್ಯಕ್ಕಾಗಿ ನಡೆದ ರಾಜ್ಯಮಟ್ಟದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ರಾಜ್ಯದ 79 ಸಿಬಿಎಸ್‌ಇ ಮಾದರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 158 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು.ಸ್ಪರ್ಧೆಯಲ್ಲಿ ದೋಕಾ ಜೈನ್ ಶಾಲೆಯ ವರ್ಷಾ ಮತ್ತು ಪ್ರಿಯಾಂಕಾ ದ್ವಿತೀಯ ಸ್ಥಾನ ಪಡೆದರೆ, 9ನೇ ತರಗತಿಯ ವಿದ್ಯಾರ್ಥಿನಿಯರಾದ ಸನಾ ತಬಸ್ಸುಮ್ ಮತ್ತು ಪೂಜಿತಾ ಅವರು ಸಾರಿಗೆ ಮತ್ತು ಸಂಪರ್ಕದಡಿಯಲ್ಲಿ ಮಹಿಳೆಯರ ಸುರಕ್ಷಿತ ಉಪಕರಣ ವಸ್ತು ಪ್ರರ್ದಶನಕ್ಕೆ ಪ್ರಶಂಸೆ ದೊರೆಯಿತು.
ಈ ಸ್ಪರ್ಧೆಯಲ್ಲಿ ಮಕ್ಕಳ ಜೊತೆ ಶಾಲೆಯ ಶಿಕ್ಷಕಿಯರಾದ ಜೋತ್ಸನಾ ಕುಮಾರಿ ಮತ್ತು ಕುಮುದಾ ದಿನೇಶ ಭಾಗವಹಿಸಿದ್ದರು.ಮಕ್ಕಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲ ದೀಪಿಕಾ ರೆಡ್ಡಿ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
-------2ವೈಡಿಆರ್15
ಬೆಂಗಳೂರಿನ ವೆಂಕಟ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಯಾದಗಿರಿಯ ದೋಕಾ ಜೈನ್ ಶಾಲೆ ದ್ವಿತೀಯ ಸ್ಥಾನ ಪಡೆಯಿತು.