ಸಾರಾಂಶ
secretory, president meetinf in Dharawad at Hunusagi
-ವಾಲ್ಮಿಯಲ್ಲಿ ಕರ್ನಾಟಕದ 18 ಯೋಜನಾ ಮಟ್ಟದ ಮಹಾಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆ
------ಕನ್ನಡಪ್ರಭವಾರ್ತೆ ಹುಣಸಗಿ
ಧಾರವಾಡದ ವಾಲ್ಮಿಯಲ್ಲಿ ಕರ್ನಾಟಕದ 18 ಯೋಜನಾ ಮಟ್ಟದ ಮಹಾಮಂಡಲಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಿಂದ ಕಕ್ಕೇರಾ ಮಹಾಂಡಳದ ಅಧ್ಯಕ್ಷ ರಂಗಪ್ಪ ಡಂಗಿ, ಷಣ್ಮುಖ ಡೊಣ್ಣಿಗೇರಿ ಹಾಗೂ ರಾಜು ಖಾಜಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.ನೀರಾವರಿಯಲ್ಲಿ ರೈತರಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯದ ಅತಿ ದೊಡ್ಡ ಯೋಜನಾ ಪ್ರದೇಶ ಕೃಷ್ಣಾ ಅಚ್ಚುಕಟ್ಟು ಪ್ರದೇಶದ 750 ನೀರು ಬಳಕೆದಾರ ಸಹಕಾರ ಸಂಘಗಳನ್ನು ಹೆಚ್ಚು ಜನಸ್ನೇಹಿ ಹಾಗೂ ಪರಿಣಾಮಕಾರಿ ಚಟುವಟಿಕೆಗೆ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಳೆದ ಮೂರು ದಶಕಗಳಿಂದ ನೀರು ಬಳಕೆದಾರ ಸಹಕಾರ ಸಂಘಗಳನ್ನು ಬಲಪಡಿಸಿ, ಸರ್ಕಾರದ ಗಮನ ಸೆಳೆಯಲು ಇಲ್ಲಿಯವರೆಗೆ ನಿರಿಕ್ಷಿತ ಪ್ರಯತ್ನ ಆಗಿಲ್ಲ. ಆದರೆ, ಇದೀಗ ರಾಜ್ಯದ 18 ಯೋಜನಾ ಪ್ರದೇಶಗಳಲ್ಲಿ ವಿತರಣಾ ಹಾಗೂ ಯೋಜನಾ ಮಟ್ಟದ ಮಹಾ ಮಂಡಳಿ ರಚನೆಯಾಗುತ್ತಿರುವುದು ಖುಷಿಯ ಸಂಗತಿಯಾಗಿದೆ. ರಾಜ್ಯ ಜಲ ಸಂಪನ್ಮೂಲ ಮಂತ್ರಿ ಹಾಗೂ ಉಪಮುಖ್ಯಂತ್ರಿ ಡಿ.ಕೆ. ಶಿವಕುಮಾರ ಶೃಂಗ ಮಹಾಮಂಡಳಿ ರಚನೆಗೆ ಆಸಕ್ತಿ ತೋರಿದ್ದು, ಸಹಕಾರ ಮಟ್ಟದ ಎಲ್ಲಾ ಯೋಜನಾ ಪ್ರದೇಶದಲ್ಲಿ ಹೊಸ ಹುಮ್ಮಸ್ಸು ಮೂಡಿದೆ ಎಂದರು.ಶೃಂಗ ಮಹಾಮಂಡಳಿ ಯೋಜನಾ ಮಟ್ಟದ ನೀರು ಬಳಕೆದಾರ ಸಂಘಗಳು, ನೀರು ನಿರ್ವಹಣೆಯ ಮಹತ್ವ, ಸಹಕಾರ ತತ್ವದಲ್ಲಿ ನೀರು ವಿತರಣೆ, ನೀರಿನ ಮಿತವ್ಯಯ ಸಾಧಿಸುವಲ್ಲಿ ಮಹತ್ತರ ಹೆಜ್ಜೆ ಇಟ್ಟಂತಾಗುವುದು ಎಂದರು.
2000 ಇಸವಿಯಲ್ಲಿ ಕರ್ನಾಟಕ ಸರ್ಕಾರ ನೀರಾವರಿ ಕಾಯ್ದೆಯನ್ನು ತಿದ್ದುಪಡಿ ತಂದು, ನೀರು ಬಳಕೆದಾರ ಸಹಕಾರ ಸಂಘಗಳ ಬಲವರ್ಧನೆ ಮಾಡಿದ್ದನ್ನು ಸ್ಮರಿಸಬಹುದು. ಇದಕ್ಕಾಗಿ ಹಿಂದಿನ ರಾಜ್ಯ ಸರ್ಕಾರದ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ನೇತ್ರತ್ವದಲ್ಲಿ ಸುಧಾರಣಾ ಆಯೋಗ ರಚನೆ ಮಾಡಲಾಗಿತ್ತು. ಆಗ ನೀರು ಬಳಕೆದಾರ ಸಹಕಾರ ಸಂಘಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಿತ್ತು ಎಂದರು.-----
ಫೋಟೊ: 23ವೈಡಿಆರ್7ಧಾರವಾಡದ ವಾಲ್ಮಿಯಲ್ಲಿ ಕರ್ನಾಟಕದ 18 ಯೋಜನಾ ಮಟ್ಟದ ಮಹಾಮಂಡಳಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ ನಡೆಯಿತು.