ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಉಗ್ರರ ಅಟ್ಟಹಾಸಕ್ಕೆ ಹಿಂದೂಗಳು ಬಲಿಯಾಗಲು ಅಲ್ಲಿನ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರದ ಭದ್ರತಾ ಲೋಪವೇ ಕಾರಣ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮೇಯರ್‌ಸಂದೇಶ ಸ್ವಾಮಿ ಆರೋಪಿಸಿದ್ದಾರೆ.ಬಿಜೆಪಿ ವತಿಯಿಂದ ಗುರುವಾರ ಕಾಶ್ಮೀರ ಭಾರತದ ಮುಕಟ. ಕಾಯ್ದೆ 370 ಜಾರಿಯಾದ ಮೇಲೆ ಇಲ್ಲಿನ ಸುಂದರ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶ ವಿದೇಶದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಹೀಗಿರುವಾಗ ಅಲ್ಲಿನ ರಾಜ್ಯ ಸರ್ಕಾರ ಪ್ರವಾಸಿಗರ ಹಿತರಕ್ಷಣೆಗಾಗಿ ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದರು.ಜಮ್ಮು- ಕಾಶ್ಮೀರ ರಾಜ್ಯದ ಆದಾಯ ಮೂಲವೇ ಪ್ರವಾಸೋದ್ಯಮ. ಇದೀಗ ನಡೆದಿರುವ ಉಗ್ರರ ದಾಳಿಯು ಇಡೀ ದೇಶವನ್ನು ಆತಂಕಕ್ಕೆ ದೂಡಿದೆ. ಸುಮಾರು 26 ಮಂದಿ ಹಿಂದೂಗಳ ಹತ್ಯೆ ಮಾನವ ಕುಲಕ್ಕೆ ಕಳಂಕ ತಂದೊಡ್ಡಿದೆ ಎಂದು ಅವರು ತಿಳಿಸಿದ್ದಾರೆ. ಉಗ್ರರ ಹತ್ಯಾಕಾಂಡ ನಮ್ಮ ದೇಶದೊಳಗೆ ಮಾತ್ರ ಆತಂಕವನ್ನು ಸೃಷ್ಟಿಸಿಲ್ಲ. ಇಡೀ ವಿಶ್ವದಲ್ಲಿಯೇ ಸಂಚಲನ ಮೂಡಿಸಿದೆ. ವಿದೇಶಿ ಪ್ರವಾಸಿಗರು ಕಾಶ್ಮೀರ ಭೇಟಿಗೆ ಹಿಂದು ಮುಂದು ನೋಡುವಂತಾಗಿದೆ. ಒಂದು ಧರ್ಮೀಯರ ದ್ವೇಷ ದಳ್ಳುರಿಗೆ ಬಲಿಯಾದ ಕುಟುಂಬಗಳ ಪಾಡೇನು ಎಂಬುವ ಪ್ರಶ್ನೆ ನಮ್ಮನ್ನು ಕಾಡದಿರದು. ಇಂತಹ ಘಟನೆಗಳು ಮರುಕಳಿಸಬಾರದು. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಉಗ್ರರ ನಿರ್ನಾಮಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ.