ಬಾಳೆಹೊನ್ನೂರುನವರಾತ್ರಿ ಸಂದರ್ಭದಲ್ಲಿ ಪುಟಾಣಿ ಮಕ್ಕಳಿಗೆ ಪೋಷಕರು ದೇವರ ವೇಷಭೂಷಣ ತೊಡಿಸಿ ದೇವರ ಕಾಣುವುದು ಜೀವನದ ಅತ್ಯುತ್ತಮ ಭಾಗ್ಯ ಎಂದು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ ಹೇಳಿದರು.
ನವರಾತ್ರಿ ಪೂಜಾ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುನವರಾತ್ರಿ ಸಂದರ್ಭದಲ್ಲಿ ಪುಟಾಣಿ ಮಕ್ಕಳಿಗೆ ಪೋಷಕರು ದೇವರ ವೇಷಭೂಷಣ ತೊಡಿಸಿ ದೇವರ ಕಾಣುವುದು ಜೀವನದ ಅತ್ಯುತ್ತಮ ಭಾಗ್ಯ ಎಂದು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ ಹೇಳಿದರು.
ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಶರನ್ನವರಾತ್ರಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಹಿಂದೂ ದೇವಾನು ದೇವತೆಗಳ ವೇಷಭೂಷಣ ಸ್ಪರ್ಧೆಯಲ್ಲಿ ಮಾತನಾಡಿದರು. ಪುಟಾಣಿ ಮಕ್ಕಳನ್ನು ಹಿರಿಯರು ದೇವರಿಗೆ ಹೋಲಿಸುತ್ತಾರೆ. ಪುಟಾಣಿ ಮಕ್ಕಳು ನಿಷ್ಕಲ್ಮಶ ಮನಸ್ಸನ್ನು ಹೊಂದಿ ಪರಿಶುದ್ಧ ಪ್ರೀತಿ ತೋರುತ್ತಾರೆ. ಅಂತಹ ಮಕ್ಕಳಿಗೆ ವರ್ಷದಲ್ಲಿ ಒಮ್ಮೆಯಾದರೂ ಸಹ ದೇವರ ವೇಷವನ್ನು ತೊಡಿಸಿ ಅವರಲ್ಲಿ ದೇವರನ್ನು ಕಾಣುವುದು ನಮ್ಮ ಮನಸ್ಸಿಗೆ ಹೆಚ್ಚಿನ ನೆಮ್ಮದಿ ನೀಡಲಿದೆ. ಮಕ್ಕಳು ಸಹ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ ಮಕ್ಕಳ ಪ್ರೀತಿ, ನಿಷ್ಕಲ್ಮಶ ಮನಸ್ಸಿಗೆ ತಲೆ ಭಾಗದವರು ಯಾರೂ ಸಹ ಇಲ್ಲ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ನಿಜವಾದ ದೈವ ಸ್ವರೂಪ ಕಾಣುವ ಉದ್ದೇಶದಿಂದ ಹಿಂದೂ ದೇವರ ವೇಷ ಸ್ಪರ್ಧೆಯನ್ನು ಕಳೆದ 4 ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಮುದ್ದು ಮನಸ್ಸಿನ ಮಕ್ಕಳು ದೇವರ ವೇಷ ತೊಟ್ಟು ನಿಜವಾಗಿಯೂ ದೇವರೆ ಪ್ರತ್ಯಕ್ಷವಾದಂತಹ ಭಾವನೆ ಉಂಟಾಗಿದೆ. ಇಂತಹ ಸ್ಪರ್ಧೆಗಳ ಮೂಲಕ ಸಂಸ್ಕೃತಿ, ಸಂಸ್ಕಾರ ಹಾಗೂ ದೇವರ ಮೇಲಿನ ಭಕ್ತಿ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದರು.
ಕೊಪ್ಪದ ಯುವ ಗಾಯಕಿ ಪ್ರಣತಿ ಲಕ್ಷ್ಮೀಶ್, ಹಸುವಿನ ಪ್ರತಿಕೃತಿಯಿಂದ ಸುರಿಯುತ್ತಿರುವ ಹಾಲು ಕುಡಿಯುವ ಮೂಲಕ ಕಾರ್ಯಕ್ರಮ ವಿಶೇಷವಾಗಿ ಉದ್ಘಾಟಿಸಿದ್ದು ಗಮನ ಸೆಳೆಯಿತು.ಛದ್ಮ ವೇಷ ಸ್ಪರ್ಧೆಯ 7 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ರುವಾಂಶಿ ಚೇತನ್ (ಪ್ರ), ಸ್ಪಕ್ಷ (ದ್ವಿ), ಪಿ.ವಿಹಾನ್ (ತೃ), ಪ್ರತೀಕ್ಷಾ, ಅವ್ಯುಕ್ತ ಶಶಿಧರ್ (ಚತುರ್ಥ) ಸ್ಥಾನ ಪಡೆದರು. 15 ವರ್ಷದೊಳಗಿನ ವಿಭಾಗದಲ್ಲಿ ಜೆ.ಎಚ್.ಸಾನ್ವಿಕ (ಪ್ರ), ಪ್ರಣಮ್ಯ ಆರ್.ಶೆಟ್ಟಿ (ದ್ವಿ), ಪ್ರಣಮ್ (ತೃ), ಹರ್ಷಿತಾ ಎಸ್.ಗೌಡ, ಹನ್ವಿ (ಚತುರ್ಥ) ಸ್ಥಾನ ಪಡೆದರು.
ಸ್ಪರ್ಧೆ ತೀರ್ಪುಗಾರರಾದ ಎಚ್.ಎನ್.ವಿಶ್ವನಾಥ್, ಕೆ.ಎಂ.ರಾಘವೇಂದ್ರ, ಭಾಗ್ಯ ನಂಜುಂಡಸ್ವಾಮಿ, ಎ.ಪಿ. ನಾಗರಾಜ್, ಪ್ರತೀಕ್ಷಾ ಕೊಪ್ಪ, ಸುನೇಹಾ ಶೆಟ್ಟಿ, ನವರಾತ್ರಿ ದುರ್ಗಾದೇವಿ ಪೂಜಾ ಸಮಿತಿ ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಸದಸ್ಯರಾದ ಎಚ್.ಎಚ್.ಕೃಷ್ಣಮೂರ್ತಿ, ಬಿ.ಕೆ.ನಾಗರಾಜ್ ಬರಗಲ್, ಕೆ.ಪ್ರಶಾಂತ್‌ಕುಮಾರ್, ಎಂ.ನಾರಾಯಣ ಮೇಲ್ಪಾಲ್, ಎ.ಸಿ.ಕೃಷ್ಣಮೂರ್ತಿ, ಬಿ.ಎ.ರಾಜಪ್ಪಗೌಡ, ದಿನೇಶ್ ತುಪ್ಪೂರು, ಸುಧಾಕರ್ ಬನ್ನೂರು ಮತ್ತಿತರರು ಇದ್ದರು.(ಬಾಕ್ಸ್)
ಇಂದು ಮಯೂರ ವಾಹಿನಿ ಪೂಜಾ ಪಾರಾಯಣಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ನವರಾತ್ರಿ ಮಹೋತ್ಸವದ ಅಂಗವಾಗಿ ಅ.13ರ ಮಂಗಳವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಯೂರ ವಾಹಿನಿ ಕೌಮಾರೀ ಪೂಜಾ ಪಾರಾಯಣ ನಡೆಯಲಿದೆ.
ಸಂಜೆ 6ರಿಂದ 7.45ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 8ರಿಂದ ಪುತ್ತೂರಿನ ಸಂಸಾರ ಕಲಾವಿದರಿಂದ ನಂಬಿಕೆದಾಯೆ ಎಂಬ ಹಾಸ್ಯಮಯ ತುಳು ನಾಟಕ ನಡೆಯಲಿದೆ.೧೨ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ ಹಿಂದೂ ದೇವಾನು ದೇವತೆಗಳ ವೇಷಭೂಷಣ ಸ್ಪರ್ಧೆಯನ್ನು ಕೊಪ್ಪದ ಯುವ ಗಾಯಕಿ ಪ್ರಣತಿ ಲಕ್ಷ್ಮೀಶ್, ಹಸುವಿನ ಪ್ರತಿಕೃತಿಯಿಂದ ಸುರಿಯುತ್ತಿರುವ ಹಾಲನ್ನು ಕುಡಿವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿದರು.