ಸಾರಾಂಶ
ಹಾಸನ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಕಳೆದ ಬಾರಿ ತಾಯಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಮಾಡಲಾಯಿತು. ಹಾಗೆಯೇ ಈ ಬಾರಿಯೂ ರಾತ್ರಿ ವೇಳೆ ಅಂದರೆ ರಾತ್ರಿ ೯ ಗಂಟೆಯಿಂದ ರಾತ್ರಿ ೧೨ಗಂಟೆಯವರೆಗೆ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಮಾಡಲು ಮತ್ತು ಪ್ರತಿದಿನ ನಮ್ಮ ಸಂಘದ ವತಿಯಿಂದ ಸ್ವಯಂ ಸೇವಕರಾಗಿ ತಾಯಿ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ ಎಂದು ಜಿಲ್ಲಾ ವಿಶ್ವಕರ್ಮ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಮುಂದಿನ ದಿನಗಳಲ್ಲಿ ನಡೆಯುವಂತಹ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಹಾಗೂ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಮಾಡಲು ಅವಕಾಶ ಕೊಡುವಂತೆ ಜಿಲ್ಲಾ ವಿಶ್ವಕರ್ಮ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.ಹಾಸನ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಕಳೆದ ಬಾರಿ ತಾಯಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಮಾಡಲಾಯಿತು. ಹಾಗೆಯೇ ಈ ಬಾರಿಯೂ ರಾತ್ರಿ ವೇಳೆ ಅಂದರೆ ರಾತ್ರಿ ೯ ಗಂಟೆಯಿಂದ ರಾತ್ರಿ ೧೨ಗಂಟೆಯವರೆಗೆ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಮಾಡಲು ಮತ್ತು ಪ್ರತಿದಿನ ನಮ್ಮ ಸಂಘದ ವತಿಯಿಂದ ಸ್ವಯಂ ಸೇವಕರಾಗಿ ತಾಯಿ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ ಎಂದರು.
ಕಳೆದ ಬಾರಿಯೂ ಇದೇ ರೀತಿ ಮನವಿ ಪತ್ರ ನೀಡಿದ್ದರೂ ಸಹ ನಿಮ್ಮ ಯಾವುದೇ ಇಲಾಖೆಯಿಂದ ಸಹಕಾರ ದೊರೆತಿರುವುದಿಲ್ಲ. ಆದಕಾರಣ ದಯಮಾಡಿ ಈ ಬಾರಿಯಾದರೂ ನಮಗೆ ತಾಯಿ ಆವರಣದಲ್ಲಿ ಸೇವೆ ಮಾಡಲು ಗುರುತಿನ ಚೀಟಿ ಹಾಗೂ ಭಕ್ತಾದಿಗಳಿಗೆ ಅನ್ನದಾನ ಮಾಡಲು ನಮಗೆ ಎಲ್ಲ ರೀತಿಯ ಸಹಕಾರ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಗೌರವಾಧ್ಯಕ್ಷ ಎನ್. ವೆಂಕಟೇಶ್ ರಾಜು, ಅಧ್ಯಕ್ಷ ಎಚ್.ಆರ್. ನಾಗೇಶ್, ಕಾರ್ಯದರ್ಶಿ ಆರ್. ರಾಘವೇಂದ್ರ, ದಿನೇಶ್, ರಾಘವಾಚಾರ್ ಸೇರಿದಂತೆ ಇತರರು ಇದ್ದರು.