ನಾಳೆಯಿಂದ ಸೀರತ್ ಅಭಿಯಾನ

| Published : Sep 02 2025, 01:00 AM IST

ಸಾರಾಂಶ

ಪ್ರವಾದಿ ಮುಹಮ್ಮದ್‌ ಅವರ ಸರ್ವಕಾಲಿಕ ಬೋಧನೆಗಳನ್ನು ಪ್ರಚುರಪಡಿಸಲು ಜಮಾಅತೆ ಇಸ್ಲಾಮಿ ಹಿಂದ್ ಮತ್ತು ರಾಬಿತಾ-ಎ -ಮಿಲ್ಲತ್ ವತಿಯಿಂದ ತಾಲೂಕಿನಲ್ಲಿ ಸೆ.೩ ರಿಂದ ೧೪ರವರೆಗೆ ಪ್ರವಾದಿ ಮುಹಮ್ಮದ್ ಶೀರ್ಷಿಕೆಯಡಿ ಸೀರತ್ ಅಭಿಯಾನ-೨೦೨೫ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್ ಇಖ್ರಾ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಪ್ರವಾದಿ ಮುಹಮ್ಮದ್‌ ಅವರ ಸರ್ವಕಾಲಿಕ ಬೋಧನೆಗಳನ್ನು ಪ್ರಚುರಪಡಿಸಲು ಜಮಾಅತೆ ಇಸ್ಲಾಮಿ ಹಿಂದ್ ಮತ್ತು ರಾಬಿತಾ-ಎ -ಮಿಲ್ಲತ್ ವತಿಯಿಂದ ತಾಲೂಕಿನಲ್ಲಿ ಸೆ.೩ ರಿಂದ ೧೪ರವರೆಗೆ ಪ್ರವಾದಿ ಮುಹಮ್ಮದ್ ಶೀರ್ಷಿಕೆಯಡಿ ಸೀರತ್ ಅಭಿಯಾನ-೨೦೨೫ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್ ಇಖ್ರಾ ಹೇಳಿದರು.

ಪ್ರವಾದಿ ಮುಹಮ್ಮದ್ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು, ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ವಿವಿಧ ಧರ್ಮೀಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಅಭಿಯಾನದ ಉದ್ದೇಶ ಎಂದರು.

ಸೆ.೩ರಂದು ಬೆಳಗ್ಗೆ ೧೧ ಗಂಟೆಗೆ ಗುತ್ತೂರು ಕಾಲೋನಿಯ ವ್ರದ್ಧಾಶ್ರಮದಲ್ಲಿ ನಿವಾಸಿಗಳಿಗೆ ಹಾಗೂ ಸೆ.೪ಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ, ಸೆ.೫ಕ್ಕೆ ಪ್ರಶಾಂತ್ ನಗರದ ಅಲಿ ಮಸೀದಿಯಲ್ಲಿ ಮೌಲಾನಾ ಸಾಜೀದ್ ಉಮ್ರಿ ಅವರಿಂದ ವಿಶೇಷ ಪ್ರವಚನ ಹಾಗೂ ನಗರದ ಶಿವಮೊಗ್ಗ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯ, ಕರಪತ್ರ ವಿತರಣೆ ನಡೆಯಲಿದೆ ಎಂದರು.

ಸೆ.೬ರಿಂದ ೧೧ರವರೆಗೆ ಹರಿಹರ ಹಾಗೂ ಸುತ್ತಲಿನ ವಿವಿಧ ಧರ್ಮಗಳ ಮಠ, ಚರ್ಚ್, ಮಸೀದಿಗಳ ಧಾರ್ಮಿಕ ಗುರುಗಳನ್ನು ಭೇಟಿ ಮಾಡಿ ಪ್ರವಾದಿ ಮುಹಮ್ಮದ್‌ ಅವರ ಜೀವನಗಾಥೆ ಪುಸ್ತಕ ನೀಡಲಾಗುವುದು. ಸೆ.೧೨ರಂದು ಸಂಜೆ ೭ ರಿಂದ ೯ ಗಂಟೆವರೆಗೆ ನಗರದ ಪ್ರಶಾಂತ್ ನಗರದ ಪ್ಯಾರಡೈಸ್ ಕಲ್ಯಾಣ ಮಂಟಪದಲ್ಲಿ ಪ್ರವಾದಿ ಮುಹಮ್ಮದ್‌ ಅವರ ಜೀವನಗಾಥೆಯ ಕುರಿತು ಜಮಾಅತೆ ಇಸ್ಲಾಮಿ ಹಿಂದ್ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಗಫಾರ್ ಹಾಮೀದ್ ಉಮ್ರಿ ಹಾಗೂ ವಿವಿಧ ಧಾರ್ಮಿಕ ಗುರುಗಳಿಂದ ವಿಶೇಷ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದರು.

ಸೆ.೨೦ರಂದು ತಾಲೂಕಿನ ಎಕ್ಕೆಗೊಂದಿ ಹಾಗೂ ಭಾನುವಳ್ಳಿ ಗ್ರಾಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರಿಂದ ಗ್ರಾಮಸ್ಥರೊಂದಿಗೆ ಸೌಹಾರ್ದ ಭೇಟಿ ಕಾರ್ಯಕ್ರಮ ನಡೆಯಲಿದೆ. ಸೆ.೨೧ರ ಸಂಜೆ ೫ ಗಂಟೆಗೆ ನಗರದ ರಚನಾ ಕ್ರೀಡಾ ಕ್ಲಬ್ ಸಭಾಂಗಣದಲ್ಲಿ ಪ್ರವಾದಿ ಮುಹಮ್ಮದ್‌ ಅವರು ವಿಷಯ ಕುರಿತು ಸರ್ವಧರ್ಮೀಯರಿಗಾಗಿ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ ಉಡುಪಿ ಪ್ರವಚನ ನೀಡುವರು ಎಂದು ತಿಳಿಸಿದರು.

ಸ್ವಾಗತ ಸಮಿತಿಯ ಡಾ.ಗುಲಾಮ್ ನಬಿ ಸಾಬ್, ಸೈಯದ್ ಮುನೀರ್ ಅಹ್ಮದ್, ನಗರಸಭಾ ಸದಸ್ಯ ಕೆ.ಬಿ. ರಾಜಶೇಖರ್, ನಗರಸಭೆ ಮಾಜಿ ಸದಸ್ಯ ಎಂ.ಬಿ.ಅಣ್ಣಪ್ಪ, ವೈ.ಜಿ.ಅಬ್ದುಲ್ ಖಯೂಮ್, ಇಕ್ಬಾಲ್ ಸಾಬ್ ಮಕಾಂದಾರ್, ಹಿರಿಯ ಕ್ರೀಡಾಪಟು ಎಚ್.ನಿಜಗುಣ, ಎಕ್ಕೆಗೊಂದಿ ಎಚ್.ಬಿ.ರುದ್ರಗೌಡ, ಅಂಜುಮನ್- ಎ-ಇಸ್ಲಾಮಿಯ ಸಂಸ್ಥೆ ಅಧ್ಯಕ್ಷ ಆರ್.ಸಿ. ಜಾವೀದ್, ಮೊಹಮ್ಮದ್ ಫಾರೂಖ್ ಎಂ.ಎಂ.ಬಿ., ಹಳ್ಳಳ್ಳಿ ಶಬ್ಬೀರ್ ಖಾನ್, ಮನ್ಸೂರ್ ಭಾನುವಳ್ಳಿ, ಅಶ್ಫಾಖ್ ಉಲ್ಲಾ, ಶಫಿಸಾಬ್ ಇದ್ದರು.

- - -

-01HRR01: