ಸಾರಾಂಶ
ಆಲಮೇಲ: ಪಟ್ಟಣದ ಸಿಂದಗಿ ರಸ್ತೆಯ ಕಾಂತಪ್ಪ ಭೂಸನೂರ ತೋಟದ ಶೇಡ್‌ನಲ್ಲಿ ಬಡವರ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಇಂಡಿ ಉಪ ವಿಭಾಗಾಧಿಕಾರಿ ಆಬೀದ್ ಗದ್ಯಾಳ ನೇತೃತ್ವದಲ್ಲಿ ತಹಸೀಲ್ದಾರ ಸುರೇಶ ಚಾವಲರ್, ಗ್ರಾಮ ಆಡಳಿತ ಅಧಿಕಾರಿ ಪ್ರದೀಪ ದೊಡಮನಿ, ಗ್ರಾಮ ಸಹಾಯಕ ಸೈಪನ ವಾಲಿಕಾರ ತಂಡ ಶನಿವಾರ ಮಧ್ಯಾಹ್ನ ದಾಳಿ ನಡೆಸಿ ಸುಮಾರು 250 ಚೀಲ ಪಡಿತರ ಅಕ್ಕಿ ವಶಕ್ಕೆ ಪಡೆದಿದೆ. ಪ್ರಮುಖ ಆರೋಪಿ ಅಶೋಕ ಭೂಸನೂರ ಹಾಗೂ ಇತರರು ಸ್ಥಳದಲ್ಲೇ ಎರಡು ಗೂಡ್ಸ್ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಸಿಂದಗಿ ಸಿಪಿಐ ಡಿ. ಹುಲುಗಪ್ಪ, ಪಿಎಸ್‌ಐ ಕುಮಾರ ಹಾಡಕಾರ, ಆಹಾರ ನಿರೀಕ್ಷಕ ರಮೇಶ ತಳವಾರ ಭೇಟಿ ನೀಡಿ ಮಹಜರು ನಡೆಸಿ, 250 ಚೀಲ ಅಕ್ಕಿ, ಎರಡು ವಾಹನಗಳು ಜಪ್ತಿ ಮಾಡಿದರು. ಆಲಮೇಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಬ್ಬಂದಿ ಎಸ್.ಕೆ.ವಾಗಮೋರೆ, ಆರ್.ಎಸ್.ಪಾಟೀಲ, ಎಸ್.ಎಸ್.ಬಾಪಗೊಂಡ, ಎಂ. ಎಸ್. ಬಿರಾದಾರ, ಸಿದ್ದು ದಿಂಡವಾರ, ರಾಜು ರಾಠೋಡ್ ,ವಿ.ಎಸ್. ಆಳ್ಳೂರ, ಶ್ರೀಶೈಲ ಮಡಕೇಶ್ವರ, ಎಚ್.ಎಸ್.ನಂದರಗಿ, ಪಿ.ಎಂ.ಕೊಳ್ಳೂರ, ಶಿವು ನಾಟೀಕಾರ ಇದ್ದರು.