ಹಳಿಯಾಳ ಅರಣ್ಯ ವಲಯದಲ್ಲಿ ₹3.50 ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆ ವಶ

| Published : Jan 24 2025, 12:45 AM IST

ಸಾರಾಂಶ

ಖಚಿತ ಮಾಹಿತಿ ಮೇರೆಗೆ ಜಾವಳ್ಳಿ ಉಪವಲಯ ಅರಣ್ಯಾಧಿಕಾರಿಗಳ ತಂಡವು ಜ. 21ರಂದು ರಾತ್ರಿ ಅಕ್ರಮವಾಗಿ ದಾಸ್ತಾನು ಮಾಡಿದ 23 ಸಾಗವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಹಳಿಯಾಳ: ಹಳಿಯಾಳ ಅರಣ್ಯ ವಲಯದ ಅಜಗಾಂವ ಗ್ರಾಮದ ವ್ಯಾಪ್ತಿಯ ಅತಿಕ್ರಮಣ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹3.50 ಲಕ್ಷ ಮೌಲ್ಯದ 23 ಸಾಗವಾನಿ ತುಂಡುಗಳನ್ನು ಅರಣ್ಯ ಇಲಾಖೆಯವರು ಜಪ್ತಿ ಮಾಡಿದ್ದಾರೆ.

ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತಲೆಮರೆಸಿಕೊಂಡ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.ಖಚಿತ ಮಾಹಿತಿ ಮೇರೆಗೆ ಜಾವಳ್ಳಿ ಉಪವಲಯ ಅರಣ್ಯಾಧಿಕಾರಿಗಳ ತಂಡವು ಜ. 21ರಂದು ರಾತ್ರಿ ಅಕ್ರಮವಾಗಿ ದಾಸ್ತಾನು ಮಾಡಿದ 23 ಸಾಗವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾರ ನಾಲ್ವರು ಆರೋಪಿಗಳಾದ ಅಜಗಾಂವ ಗ್ರಾಮದ ಗದಿಗೆಪ್ಪ ಕಾಗಿ, ಗುರುರಾಜ ಕಾಗಿ, ಮೌಲಾನಾ ಮುಜಾವರ ಹಾಗೂ ಕೆಸರೊಳ್ಳಿ ಗ್ರಾಮದ ಸಮಿಮ ಸನದಿ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಹಳಿಯಾಳ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೀರಪ್ಪ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಳಿಯಾಳ ವಲಯ ಅರಣ್ಯಾಧಿಕಾರಿ ಬಸವರಾಜ ಎಂ., ಹಾಗೂ ಸಿಬ್ಬಂದಿಗಳಾದ ಗಣೇಶ ಮಾಷ್ಠಿ, ಮಹೇಶ ಕಲಕಟ್ಟಿ, ಶಂಕರಾನಂದ ಜಿಡ್ಡಿಮನಿ, ಸಿದ್ದಪ್ಪ ಮಳಕನ್ನವರ ಇತರರು ಭಾಗವಹಿಸಿದ್ದರು.ಅಡಕೆ ಕಳ್ಳತನ: ಪ್ರಕರಣ ದಾಖಲು

ಶಿರಸಿ: ಅಡಕೆ ಸಂಗ್ರಹಣಾ ಕೊಠಡಿಯ ಒಳನುಗ್ಗಿದ ಕಳ್ಳರು ಸಿಪ್ಪೆ ಸಮೇತ ೩೫ ಅಡಕೆ ಚೀಲಗಳನ್ನು ಕಳ್ಳತನ ಮಾಡಿದ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಂಡಗಿ ಕೊರ್ಲಕಟ್ಟಾ ರಸ್ತೆ ಸಮೀಪ ಕಳ್ಳತನ ನಡೆದಿದೆ. ಮಹಮ್ಮದ್ ಶಫಿ ಅಬ್ದುಲ್ ಮಜೀದ ಸಾಬ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಮಹಮ್ಮದ್‌ ಶಫಿ ಅವರು ಅವರು ಅಡಕೆ ಸಂಗ್ರಹಣಾ ಕೊಠಡಿಯಲ್ಲಿ ಒಣಗಿಸಿದ ಸಿಪ್ಪೆ ಸಮೇತ ಅಡಕೆಗಳನ್ನು ೨೦ ಕೆಜಿ ತೂಕದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಇಟ್ಟಿದ್ದರು. ಒಟ್ಟು ೫೨ ಚೀಲಗಳನ್ನು ಒಂದರ ಮೇಲೆ ಒಂದು ಇಟ್ಟಿದ್ದರು. ಆದರೆ ಕೊಠಡಿಗೆ ಬೀಗ ಹಾಕಿರಲಿಲ್ಲ. ಅವರು ನಮಾಜ್‌ ಮುಗಿಸಿ ಬರುವಷ್ಟರಲ್ಲಿ 17 ಚೀಲ ಮಾತ್ರ ಇದೆ. ಸುಮಾರು ₹೮೦ ಸಾವಿರ ಮೌಲ್ಯದ ೩೫ ಸಿಪ್ಪೆ ಸಮೇತ ಅಡಕೆ ಚೀಲಗಳನ್ನು ಯಾರೋ ಕಳ್ಳತನ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.