ವಿಪ ಸ್ಥಾನಗಳಿಗೆ ಜನಪರ ಕಾಳಜಿ ವ್ಯಕ್ತಿಗಳ ಆಯ್ಕೆಗೊಳಿಸಿ: ರೇಣುಕಾಚಾರ್ಯ

| Published : May 29 2024, 12:51 AM IST

ವಿಪ ಸ್ಥಾನಗಳಿಗೆ ಜನಪರ ಕಾಳಜಿ ವ್ಯಕ್ತಿಗಳ ಆಯ್ಕೆಗೊಳಿಸಿ: ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ತು ಬುದ್ಧಿವಂತರು, ಚಿಂತಕರ ಪರಿಷತ್ತಾಗಿದೆ. ಇಂತಹ ಸ್ಥಾನಗಳಿಗೆ ಹೆಚ್ಚಿನ ಜವಾಬ್ದಾರಿ ಮತ್ತು ಜನಪರ ಕಾಳಜಿವುಳ್ಳ ವ್ಯಕ್ತಿಗಳನ್ನು ಆರಿಸಿ ಕಳಿಸಬೇಕಿದೆ. ಈ ಹಿನ್ನೆಲೆ ಬಿಜೆಪಿ ಈ ಬಾರಿಯ ಪದವೀಧರರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಅನುಭವಿ ನಾಯಕ ಭೋಜೇಗೌಡ ಅವರನ್ನು ಕಣಕ್ಕಿಳಿಸಿದೆ. ಮತದಾರರು ಇಬ್ಬರಿಗೂ ಆಶೀರ್ವದಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮನವಿ ಹೊನ್ನಾಳಿಯಲ್ಲಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಿಧಾನ ಪರಿಷತ್ತು ಬುದ್ಧಿವಂತರು, ಚಿಂತಕರ ಪರಿಷತ್ತಾಗಿದೆ. ಇಂತಹ ಸ್ಥಾನಗಳಿಗೆ ಹೆಚ್ಚಿನ ಜವಾಬ್ದಾರಿ ಮತ್ತು ಜನಪರ ಕಾಳಜಿವುಳ್ಳ ವ್ಯಕ್ತಿಗಳನ್ನು ಆರಿಸಿ ಕಳಿಸಬೇಕಿದೆ. ಈ ಹಿನ್ನೆಲೆ ಬಿಜೆಪಿ ಈ ಬಾರಿಯ ಪದವೀಧರರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಅನುಭವಿ ನಾಯಕ ಭೋಜೇಗೌಡ ಅವರನ್ನು ಕಣಕ್ಕಿಳಿಸಿದೆ. ಮತದಾರರು ಇಬ್ಬರಿಗೂ ಆಶೀರ್ವದಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದರು.

ಮಂಗಳವಾರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪಟ್ಟಣದ ನ್ಯಾಯಾಲಯದ ವಕೀಲರ ಸಂಘ ಮತ್ತು ಪದಾಧಿಕಾರಿಗಳನ್ನು ಭೇಟಿಯಾಗಿ, ಡಾ.ಧನಂಜಯ ಸರ್ಜಿ ಅವರಿಗೆ ಮತನೀಡಿ ಗೆಲ್ಲಿಸುವಂತೆ ಕೋರಿ ಮತಯಾಚಿಸಿದರು.

ಬುಧವಾರದಿಂದ ಶಾಲಾ- ಕಾಲೇಜುಗಳು ಆರಂಭಗೊಳ್ಳುತ್ತಿವೆ. ಅವಳಿ ತಾಲೂಕುಗಳ ಎಲ್ಲ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ, ಬಿಜೆಪಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡ ಪರವಾಗಿ ಎಲ್ಲ ಶಿಕ್ಷಕ ಸಮುದಾಯದ ಮತಯಾಚನೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಯಪ್ಪ, ಕಾರ್ಯದರ್ಶಿ ಪುರುಷೋತ್ತಮ, ಬಳ್ಳೂರ್, ಪ್ರಕಾಶ್, ಕರುಣಾಕರ್, ಉಮಾಕಾಂತ್ ಜೋಯ್ಸ, ನೀಲಕಂಠ ಸ್ವಾಮಿ, ಉಮೇಶ್, ಮಂಜುಳಮ್ಮ ಸೇರಿದಂತೆ ವಕೀಲರ ಬಳಗದವರು ಉಪಸ್ಥಿತರಿದ್ದರು.

ಬಿಜೆಪಿ ತಾಲೂಕು ಅಧ್ಯಕ್ಷರಾದ ಜೆ.ಕೆ. ಸುರೇಶ್, ಜಿಲ್ಲಾ ಮುಖಂಡರಾದ ಶಾಂತರಾಜ್ ಪಾಟೀಲ್, ಹಿಂದುಳಿದ ವರ್ಗ ಮುಖಂಡರಾದ ಕೆ.ಪಿ. ಕುಬೇರಪ್ಪ, ನೆಲಹೊನ್ನೆ ಮಂಜುನಾಥ್, ಮಹೇಶ್ ಹುಡೇಡ್, ಸುರೇಂದ್ರ ನಾಯ್ಕ, ರಂಗಪ್ಪ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ನ್ಯಾಯಾಲಯ, ನಂತರ ಎಲ್‌ಐಸಿ ಕಚೇರಿ, ಪಿಎಲ್‌ಡಿ ಬ್ಯಾಂಕ್ ಸೇರಿ ಹಲವಾರು ಕಚೇರಿಗಳಿಗೆ ಭೇಟಿ ನೀಡಿ ಮತದಾರರಲ್ಲಿ ಮತಯಾಚನೆ ಮಾಡಲಾಯಿತು.

- - - -28ಎಚ್.ಎಲ್.ಐ2:

ವಿಧಾನ ಪರಿಷತ್ತು ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಹೊನ್ನಾಳಿ ಪಟ್ಟಣದ ಕೋರ್ಟ್ ವಕೀಲರ ಸಮೂಹವನ್ನು ಭೇಟಿಯಾಗಿ ಮತಯಾಚನೆ ಮಾಡಿದರು.