ಕನ್ನಡಪ್ರಭ ವಾರ್ತೆ ಬಾಗಲಕೋಟೆಕನ್ನಡ ವೃತ್ತಿರಂಗಭೂಮಿ ಮೇರು ನಾಟಕಕಾರ ಪಿ.ಬಿ.ದುತ್ತರಗಿ ಅವರ ಹೆಸರಿನಲ್ಲಿ ರಚಿಸಲಾದ ಪಿ.ಬಿ.ದುತ್ತರಗಿ ಟ್ರಸ್ಟ್ ನಿಂದ ರಂಗಭೂಮಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಮಹನೀಯರನ್ನು 2022-23, 2023-24 ಹಾಗೂ 2024-25ನೇ ನೇ ಸಾಲಿನ ವಾರ್ಷಿಕ ಗೌರವ ಹಾಗೂ ರಂಗಗೌರವ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಪಿ.ಬಿ.ದುತ್ತರಗಿ ಟ್ರಸ್ಟ್‌ ನ ಸದಸ್ಯ ಕಾರ್ಯದರ್ಶಿ ಸಂತೋಷ ಭೋವಿ ತಿಳಿಸಿದ್ದಾರೆ.

2022-23ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ವಿರುಪಾಕ್ಷಪ್ಪ ಗಾಯದ ಆಯ್ಕೆಯಾದರೆ, ರಂಗಗೌರವ ಪ್ರಶಸ್ತಿಗೆ ಕುಸುಮಾ ಕಂದಗಲ್ಲ, ಅರುಣ ಕೃಷ್ಣಾಜಿ ಥೋರತ ಆಯ್ಕೆಯಾಗಿದ್ದಾರೆ. 2023-24ನೇ ಸಾಲಿಗೆ ವಾರ್ಷಿಕ ಗೌರವ ಪ್ರಶಸ್ತಿಗೆ ಬೆಬಿಜಾನ ಕಂದಗಲ್ಲ, ರಂಗಗೌರವ ಪ್ರಶಸ್ತಿಗೆ ಭೀಮರಾಯ ಭಂಡಾರಿ, ವೀರಭದ್ರಪ್ಪ ಬಡಿಗೇರ, 2024-25ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಅನಂತ ಬಬಲೇಶ್ವರ, ರಂಗಗೌರವ ಪ್ರಶಸ್ತಿಗೆ ಬಸವರಾಜ ಮಠ, ಬಂಗಾರೇವ್ವ ಚಿಮಲ ಆಯ್ಕೆಯಾಗಿದ್ದಾರೆ. ವಾರ್ಷಿಕ ಗೌರವ ಪ್ರಶಸ್ತಿ 25 ಸಾವಿರ ರೂ. ಹಾಗೂ ರಂಗಗೌವರ ಪ್ರಶಸ್ತಿ ₹ 10 ಸಾವಿರ ಒಳಗೊಂಡಿದೆ ಎಂದು ತಿಳಿಸಿದ್ದಾರೆ.