ಸಾರಾಂಶ
ಚಿತ್ರದುರ್ಗ: ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ 9ನೇ ತರಗತಿಯ ಟಿ.ಜಾಗೃತ್ ಹಾಗೂ ಎಸ್.ಹರ್ಷವರ್ಧನ್ ಅವರು ಮಂಗಳೂರಿನಲ್ಲಿ ನಡೆದ 2024-25 ನೇ ಸಾಲಿನ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಹುಪಯೋಗಿ ಮತ್ತು ಆಧುನಿಕ ಎತ್ತಿನಗಾಡಿ ಈ ವಿಷಯದಡಿ ತಯಾರಿಸಿದ ವಿಜ್ಞಾನ ಮಾದರಿಯು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ವಿಜ್ಞಾನ ಮಾದರಿಗಳಲ್ಲಿ ಮೊದಲ ಹತ್ತು ಮಾದರಿಗಳಲ್ಲಿ ಸ್ಥಾನ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಪುದುಚೇರಿಯಲ್ಲಿ 2025 ಜನವರಿ 20 ರಿಂದ 25 ರವೆರೆಗೆ ರಾಷ್ಟ್ರಮಟ್ಟದ ಸ್ಪರ್ಧೆ ಜರುಗಲಿದೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಡಿಡಿಪಿಐ ಎಂ.ಆರ್. ಮಂಜುನಾಥ್, ಬಿಇಒ ಎಸ್.ನಾಗಭೂಷಣ್, ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ್ ಕುಮಾರ್, ಎಸ್.ಎಂ ಪೃಥ್ವೀಶ ಹಾಗೂ ಸುನೀತಾ, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಐಸಿಎಸ್‍ಇ ಪ್ರಾಂಶುಪಾಲ ಬಸವರಾಜಯ್ಯ.ಪಿ, ಐಸಿಎಸ್‍ಇ ಉಪ ಪ್ರಾಂಶುಪಾಲ ಅವಿನಾಶ್ ಬಿ ಅಭಿನಂದಿಸಿದ್ದಾರೆ.
------------ಫೋಟೋ: 28 ಸಿಟಿಡಿ7