ಸಾರಾಂಶ
ನಗರದ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತುಮಕೂರು: ನಗರದ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಡೆದ ಎತ್ತರ ಜಿಗಿತದಲ್ಲಿ ನಿಸರ್ಗ, ಚಕ್ರ ಎಸೆತದಲ್ಲಿ ಪೂಜಾ ಪ್ರಥಮ, 100 ಮೀ. ಓಟದಲ್ಲಿ ಸಾಯಿ ಚಿನ್ಮಯಿ ದ್ವೀತಿಯ, 1500 ಮೀ. ಓಟದಲ್ಲಿ ಮಾನ್ಯ ದ್ವೀತಿಯ, ಗುಂಡು ಎಸೆತದಲ್ಲಿ ಚಿಂತನ ತೃತೀಯ, 4*100 ಮೀ. ರಿಲೇನಲ್ಲಿ ದ್ವಿತೀಯ, ವಾಲಿಬಾಲ್, ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.