ಸಾರಾಂಶ
ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಚೀಲಾಪುರ ಗ್ರಾಮದ ಎನ್. ಮಂಜನಾಯ್ಕ ಅಧ್ಯಕ್ಷ ಹಾಗೂ ಹುಣಸಘಟ್ಟ ಗ್ರಾಮದ ರತ್ನಮ್ಮ ಗಣೇಶ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹುಣಸಘಟ್ಟ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಚೀಲಾಪುರ ಗ್ರಾಮದ ಎನ್. ಮಂಜನಾಯ್ಕ ಅಧ್ಯಕ್ಷ ಹಾಗೂ ಹುಣಸಘಟ್ಟ ಗ್ರಾಮದ ರತ್ನಮ್ಮ ಗಣೇಶ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡರು.ಈ ಹಿಂದೆ ರೋಷನ್ ಜಮೀರ್ ಅಧ್ಯಕ್ಷರಾಗಿ, ರಹಮತ್‌ಬಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ, ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಎನ್, ಮಂಜನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಗಣೇಶ್ ನಾಮಪತ್ರ ಹೊರತುಪಡಿಸಿ, ಬೇರಾರೂ ನಾಮಪತ್ರಗಳು ಸಲ್ಲಿಸಲಿಲ್ಲ. ಆದ್ದರಿಂದ ಚುನಾವಣಾ ಅಧಿಕಾರಿಯಾಗಿದ್ದ ಎಇಇ ಮಂಜುನಾಥ ಅವರು ಎನ್. ಮಂಜನಾಯ್ಕ ಅಧ್ಯಕ್ಷ ಹಾಗೂ ರತ್ನಮ್ಮ ಗಣೇಶ್ ಉಪಾಧ್ಯಕ್ಷರರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ವೈ ಮಲ್ಲಿಕಾರ್ಜುನ, ಕಾರ್ಯದರ್ಶಿ ನಾಗರಾಜ್, ಸದಸ್ಯರಾದ ರಾಜಪ್ಪ, ಶ್ರೀನಿವಾಸ, ಹನುಮಂತಪ್ಪ, ರೋಷನ್ ಜಮೀರ್ ರತ್ನಮ್ಮ, ಪರ್ವೀನ್ ಬಾನು, ರತ್ನಮ್ಮ ಹಾಲಪ್ಪ ಮೊದಲಾದವರು ಉಪಸ್ಥಿತರಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.- - - -13ಎಚ್.ಎಲ್.ಐ1:
ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಪಂ ಅಧ್ಯಕ್ಷರಾಗಿ ಮಂಜನಾಯ್ಕ, ಉಪಾಧ್ಯಕ್ಷರಾಗಿ ರತ್ನಮ್ಮ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದು, ಗ್ರಾಪಂ ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಅಭಿನಂದಿಸಿದರು.