ಸಾರಾಂಶ
- ನ್ಯೂ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ನೇತೃತ್ವ - - - ದಾವಣಗೆರೆ: ನಗರದ ಪ್ರವಾಸಿ ಮಂದಿರ ರಸ್ತೆಯ ರೋಟರಿ ಬಾಲಭವನದಲ್ಲಿ ನ್ಯೂ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ ಡಿಸ್ಟ್ರಿಕ್ಟ್ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆಯಿತು.
ಒಟ್ಟು ಏಳು ವಿಭಾಗಗಳಲ್ಲಿ ಪಂದ್ಯಾವಳಿ ನಡೆದಿದ್ದು, ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ಇಬ್ಬರು ಬಾಲಕರು/ ಬಾಲಕಿಯರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು.7 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಎಂ.ಎಂ. ಜನನಿ ಪ್ರಥಮ, ಋತ್ವಿ ಸಿರಿ ದ್ವಿತೀಯ, 9 ವರ್ಷದ ಬಾಲಕಿಯರ ವಿಭಾಗದಲ್ಲಿ ಸಾನ್ವಿಕ, ಪೂರ್ವಿಕ, ಬಾಲಕರ ವಿಭಾಗದಲ್ಲಿ ಜಿ.ಎಸ್. ಆಕಾಶ್, ಮೊಹಮ್ಮದ್ ಆರ್ಯನ್, 11 ವರ್ಷದ ಬಾಲಕರ ವಿಭಾಗದಲ್ಲಿ ಅಮಿತ್ ಚಂದ್ರ ಎಂ.ಎಸ್. ಅದ್ವೈತ್, ಬಾಲಕಿಯರ ವಿಭಾಗದಲ್ಲಿ ಹರಿಹರದ ಎಸ್.ಎಂ. ಶ್ರಾವ್ಯ, 13 ವರ್ಷದ ಬಾಲಕಿಯರ ವಿಭಾಗದಲ್ಲಿ ಸೌಜನ್ಯ, ಯುವರಾಜ್, ಬಾಲಕರ ವಿಭಾಗದಲ್ಲಿ ಇಶಾನ್ ಬಂಗೇರ, ಹೇಮಾದ್ರಿ ಮೂರ್ತಿ, 15 ವರ್ಷದ ಬಾಲಕರ ವಿಭಾಗದಲ್ಲಿ ಎಂ.ಎಸ್. ದಿಗಂತ್, ಜಿ.ಎಸ್. ನಿಶ್ಚಲ್, 17 ವರ್ಷದ ಬಾಲಕರ ವಿಭಾಗದಲ್ಲಿ ಹರಿಹರದ ಎಂ.ಎಸ್. ಸ್ವಯಂ, ಬಿ.ಯುವರಾಜ್, ಬಾಲಕಿಯರ ವಿಭಾಗದಲ್ಲಿ ದಾವಣಗೆರೆಯ ಸಿ.ಎನ್.ವೇದಶ್ರೀ, 19 ವರ್ಷದ ಬಾಲಕರ ವಿಭಾಗದಲ್ಲಿ ಎ.ಅರ್ಫತ್, ವೈ.ಎಂ. ತರುಣ್ ಆಯ್ಕೆಯಾದರು.
ಆಯ್ಕೆಯಾದ ಮಕ್ಕಳಿಗೆ ನಗರದ ವಕೀಲರಾದ ಎ.ಎಂ.ಹೆಗಡೆ, ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಪಾದ್ ಹೆಗಡೆ ವಿದ್ಯಾ ಎಸ್.ಎಂ. ಪ್ರತೀಕ್ ಹೆಗಡೆ ಯುವರಾಜ್ ಮುಂತಾದವರು ಇದ್ದರು.- - - -14ಕೆಡಿವಿಜಿ31ಃ:
ನ್ಯೂ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ನಡೆದ ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಟಗಾರರು.