ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದ ಸಿ.ಬಿಎಸ್.ಸಿ ಪಠ್ಯ ಕ್ರಮದ ಶಾಲೆಗಳ ಕೀಡಾಕೂಟಗಳು ಸೆಪ್ಟಂಬರ್ 25ರಂದು ಬೆಂಗಳೂರಿನ ಶ್ರೀ ಸಿದ್ದಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಡೆದಿದ್ದು, ಹೊನ್ನಾಳಿಯ ಶ್ರೀಸಾಯಿ ಗುರುಕುಲ ವಸತಿ ಶಾಲೆಯ ಮಕ್ಕಳು, 14 ವರ್ಷದೊಳಗಿನ ವಿದ್ಯಾರ್ಥಿನಿಯರ ವಿಭಾಗದಲ್ಲಿ ಸಿ.ಬಿ.ಎಸ್.ಸಿ. ಕ್ಲಸ್ಟರ್- 8ರ ಖೋ- ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಅಡಳಿತ ಮಂಡಳಿಯ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ ತಿಳಿಸಿದರು.ಅವರು ಶನಿವಾರ ಶಾಲಾ ಅಡಳಿತ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ವಿದ್ಯಾರ್ಥಿಗಳ ತಂಡ ಹರಿಯಾಣದ ಕರ್ನಲ್ ನಲ್ಲಿ ಅಕ್ಟೋಬರ್ 14 ರಿಂದ 18ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ತಮ್ಮ ಶಾಲೆಯ ವಿಜೇತ ತಂಡದ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ತಮ್ಮ ಶಾಲೆಗೆ ಕೀರ್ತಿ ತಂದಿರುವ ವಿಷಯವಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದಿರುವ ಕ್ರೀಡಾಕೂಟದಲ್ಲಿ 14 ವರ್ಷದೊಳಿಗಿನ ಸುಮಾರು 53 ತಂಡಗಳು ಭಾಗವಹಿಸಿದ್ದು, ಇವುಗಳಲ್ಲಿ ತಮ್ಮ ಶಾಲೆಯ ತಂಡ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರೆ, ಇನ್ನು 17 ವರ್ಷದೊಳಗಿನ ಸುಮಾರು 60 ತಂಡಗಳು ಭಾಗವಹಿಸಿದ್ದು, ಇವುಗಳಲ್ಲಿ ತಮ್ಮ ಶಾಲೆಯ ತಂಡ ಖೋ- ಖೋ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿರುವುದು ಕೂಡ ತಮ್ಮ ಸಂಸ್ಥೆಯ ಎಲ್ಲರಿಗೂ ಸಂತಸ ತಂದಿದೆ ಎಂದು ಮಾಹಿತಿ ನೀಡಿದರು.ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಡಿ.ಜಿ. ಶಾಂತನಗೌಡ ಅವರು ಮಾತನಾಡಿ, ಶ್ರೀ ಸಾಯಿ ಗುರುಕುಲ ವಸತಿಯುತ ಶಾಲೆಯಲ್ಲಿ ಬಹುಪಾಲು ಗ್ರಾಮೀಣ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಖೋ.-ಖೋ ಆಟ ಕೂಡ ಗ್ರಾಮೀಣ ಭಾಗದ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ತಮ್ಮ ಸಂಸ್ಥೆಯ ಮಕ್ಕಳು ಸಾಧನೆ ಮಾಡಿ ರಾಷ್ಠ್ರಮಟ್ಟಕ್ಕೆ ಆಯ್ಕೆಯಾಗಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದರು.
ಈ ಸಾಧನೆಗೆ ಶ್ರಮಿಸಿದ ಸಂಸ್ಥೆಯ ಕ್ರೀಡಾ ತರಬೇತಿದಾರರಾದ ಕೆ. ಮಧುಕುಮಾರ್, ಓ. ತಿಪ್ಪೇಸ್ವಾಮಿ, ಹಾಗೂ ಶಾಂತಮ್ಮ, ಶಾಲೆಯ ಅಡಳಿತ ಮಂಡಳಿಯವರಿಗೆ, ಶಿಕ್ಷಕವರ್ಗ ಕ್ರೀಡಾಪಟುಗಳಾದ ವಿದ್ಯಾರ್ಥಿಗಳಿಗೆ ಅಭಿನಂದಿಸುವುದಾಗಿ ಹೇಳಿದರು.ಇದೇ ವೇಳೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಕ್ರೀಡಾ ತರಬೇತಿದಾರರಿಗೆ ಶ್ರೀಸಾಯಿ ಗುರುಕುಲ ವಸತಿ ಶಾಲೆಯ ಅಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಡಳಿತ ಮಂಡಳಿ, ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ, ಖಜಾಂಟಿ ಡಿ.ಜಿ. ಸೋಮಪ್ಪ, ಡಿ.ಎಸ್. ಪ್ರದೀಪ್ ಗೌಡ, ಅಡಿಟ್ ಅಧಿಕಾರಿ ಡಿ.ಎಸ್. ಅರುಣ್, ಪ್ರಾಂಶುಪಾಲ ದರ್ಶನ್, ಮೋಹನ್, ಶಿಕ್ಷಕ ವರ್ಗ, ಮುಂತಾದವರು ಇದ್ದರು.