ಸ್ವಾಮಿತ್ವ ಯೋಜನೆಯಡಿ ಜಿಲ್ಲೆಯ 11ಗ್ರಾಮ ಆಯ್ಕೆ

| Published : Oct 26 2024, 01:03 AM IST

ಸ್ವಾಮಿತ್ವ ಯೋಜನೆಯಡಿ ಜಿಲ್ಲೆಯ 11ಗ್ರಾಮ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಆಯ್ಕೆಯಾದ ಗ್ರಾಮಕ್ಕೆ ಭೂಮಾಪಕರು ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮನೆ ನಿವೇಶನದ ಅಳತೆ ಮಾಡಿ ಅದಕ್ಕೆ ಸಂಬಂಧಿಸಿದ ಪ್ರಾಪರ್ಟಿ ಕಾರ್ಡನ್ನು ತಯಾರಿಸಿ ಅದನ್ನು ಅವುಗಳ ಮಾಲೀಕರಿಗೆ ನೀಡಲಾಗುವುದು

----ಮಾಲೀಕರಿಗೆ ಮನೆ, ನಿವೇಶನ ದಾಖಲೆಯ ಡಿಜಿಟಲ್‌ ಕಾರ್ಡ್‌

----ಸ್ವಾಮಿತ್ವ ಹೆಸರಿನ ಯೋಜನೆಗೆ ಕೇಂದ್ರ, ರಾಜ್ಯ ಭಾಗಿತ್ವ

-----ಚಿಕ್ಕಬಳ್ಳಾಪುರ ಜಿಲ್ಲೆಯ 11 ಗ್ರಾಮಗಳ ಆಯ್ಕೆ

........ನಿವೇಶನಗಳ ಅಕ್ರಮ ವಾಹಿವಾಟಿಗೆ ಕಡಿವಾಣಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸ್ವಾಮಿತ್ವ ಯೋಜನೆಯಡಿ ನಗರ ಹಾಗೂ ಗ್ರಾಮಠಾಣಾ ವ್ಯಾಪ್ತಿಯ ಎಲ್ಲ ಮನೆ, ನಿವೇಶನಗಳ ಅಳತೆ ಮಾಡಿ ಅದಕ್ಕೆ ಸಂಬಂಧಿಸಿದ ದಾಖಲೆಗಳ ಪ್ರಾಪರ್ಟಿ ಕಾರ್ಡ್ (ಡಿಜಿಟಲ್ ಕಾರ್ಡ್)ನ್ನು ಮನೆ ನಿವೇಶನಗಳ ಮಾಲೀಕರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿವೇಕ್ ಮಹದೇವ್ ತಿಳಿಸಿದರು.

ತಾಲೂಕಿನ ಕಮ್ಮಗುಟ್ಟಹಳ್ಳಿ ಹಾಗೂ ಗೊಂತಗಾನಹುಡ್ಯ ಗ್ರಾಮಗಳಲ್ಲಿ ಸ್ವಾಮಿತ್ವ ಯೋಜನೆಯಡಿ ಮನೆ ನಿವೇಶನಗಳ ಅಳತೆ ಕಾರ್ಯ ಮಾಡುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿಅವರು ಮಾತನಾಡಿದರು.

ಕೇಂದ್ರ, ರಾಜ್ಯ ಸರ್ಕಾರದ ಭಾಗಿತ್ವ

ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಜಾರಿ ಮಾಡಿರುವ ಈ ಸ್ವಾಮಿತ್ವ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಾರಿ ಮಾಡಲು ಚಿಂತನೆ ಮಾಡಲಾಗಿದ್ದು ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಾರಿ ಮಾಡಲಾಗುತ್ತಿದೆ. ಗ್ರಾಮ ಸಭೆಗಳಲ್ಲಿ ಗ್ರಾಮಗಳನ್ನು ಆಯ್ಕೆ ಮಾಡಿ ಆಯ್ಕೆಯಾದ ಗ್ರಾಮಕ್ಕೆ ಭೂಮಾಪಕರು ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮನೆ ನಿವೇಶನದ ಅಳತೆ ಮಾಡಿ ಅದಕ್ಕೆ ಸಂಬಂಧಿಸಿದ ಪ್ರಾಪರ್ಟಿ ಕಾರ್ಡನ್ನು ತಯಾರಿಸಿ ಅದನ್ನು ಅವುಗಳ ಮಾಲೀಕರಿಗೆ ನೀಡಲಾಗುವುದು ಎಂದರು.

ಅಕ್ರಮಗಳಿಗೆ ಕಡಿವಾಣ

ಇದರಿಂದ ಮನೆ ಮತ್ತು ನಿವೇಶನಗಳ ದಾಖಲೆಗಳ ಸಂಗ್ರಹ ಆಗುತ್ತದೆಯಲ್ಲದೆ ಅಕ್ರಮಗಳಿಗೆ ಅವಕಾಶ ಇಲ್ಲದಾಗುತ್ತದೆ. ತಾಲೂಕಿನ ಕಮ್ಮಗುಟ್ಟಹಳ್ಳಿ, ಗೊಂತಗಾನಹುಡ್ಯ, ಹಿರೆನಾಗವಲ್ಲಿ, ಜನ್ನಲಕುಂಟೆ, ಚಿಕ್ಕನಾಗವಲ್ಲಿ, ಕೆಂಚೇನಹಳ್ಳಿ, ನಲ್ಲಗುಟ್ಟಹಳ್ಳಿ, ಕೊಡೂರು, ಗೇರುಮರದಹಳ್ಳಿ, ಮುದ್ದಲಹಳ್ಳಿ, ನಾರೆಪ್ಪನಹಳ್ಳಿ ಹಾಗೂ ಮನ್ನಾರ್‌ಪುರ ಗ್ರಾಮಗಳನ್ನು ಮೊದಲ ಹಂತದಲ್ಲಿ ತೆಗೆದುಕೊಂಡು ಅಲ್ಲಿ ಸರ್ವೆ ಕಾರ್ಯ ಆರಂಭಿಸಲಾಗುತ್ತಿದೆ ಎಂದು ವಿವರಿಸಿದ ಅವರು ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದಂತೆ ಸ್ವಾಮಿತ್ವ ಯೋಜನೆಯ ಜಿಲ್ಲಾ ಮಟ್ಟದ ಕಚೇರಿಯನ್ನು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಕಚೇರಿಯ ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು

ಸ್ವಾಮಿತ್ವ ಯೋಜನೆಯ ಮೇಲ್ವಿಚಾರಕ ಜಿ.ದೇವರಾಜ್, ಭೂಮಾಪಕರಾದ ಸಂತೋಷ್‌ಮಧು, ಸುದರ್ಶನ್, ನವೀನ್ ಕುಮಾರ್, ಶಬನಮ್‌ತಾಜ್, ನವೀನ್, ಮಮತ, ಕಿಶೋರ್ ಇನ್ನಿತರರು ಇದ್ದರು.