ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆ

| Published : Jan 30 2024, 02:05 AM IST

ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿದ್ದು, ಒಟ್ಟು ೧೨ ಮಂದಿ ನೂತನವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ನಿದೇರ್ಶಕರ ಆಯ್ಕೆಗೆ ಚುನಾವಣೆ ನಡೆದಿದ್ದು, ಒಟ್ಟು ೧೨ ಮಂದಿ ನೂತನವಾಗಿ ಆಯ್ಕೆಯಾಗಿದ್ದಾರೆ.

ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨೯೮ ಮತದಾರರಿಂದು ೨೮೬ ಮತಗಳು ಮತಗಳು ಚಲಾವಣೆಯಾಗಿದ್ದವು. ಜ. ೨೭ರ ಶನಿವಾರದಂದು ನಡೆದ ಸಾಲಗಾರರ ಕ್ಷೇತ್ರದ ಚುನಾವಣೆಯಲ್ಲಿ ತೀರ್ವ ಹಣಾಹಣಿಯಿಂದ ಕೂಡಿದ್ದ ಸಾಮಾನ್ಯ ಕ್ಷೇತ್ರಕ್ಕೆ ೮ ಆಭ್ಯರ್ಥಿಗಳು ಸ್ಪರ್ಧಿಸಿದ್ದು, ಎಚ್.ಸಿ. ರಾಜಣ್ಣ ೧೫೮, ಕೆ.ವಿ. ಪುರುಷೋತ್ತಮ ೧೪೯, ಬಿ.ಸಿ. ರಮೇಶ್ ೧೪೯, ವಿನಯ್‌ಕುಮಾರ್ ಕೆ.ಎಸ್. ೧೪೯, ಡಿ.ಎಲ್. ಮಲ್ಲಯ್ಯ ೧೨೩ ಮತಗಳ ಪಡೆದು ಆಯ್ಕೆಯಾದರು.

ತೀರ್ವ ಹಣಾಹಣಿ ಇದ್ದ ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ತಿಮ್ಮಪ್ಪ ೧೦೮ ಮತಗಳನ್ನ ಪಡೆದು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಪುಟ್ಟನರಸಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಎ. ಕ್ಷೇತ್ರದಿಂದ ಕೃಷ್ಣಮೂರ್ತಿ ೧೮೨ ಮತಗಳನ್ನ ಪಡೆದು ಹಾಗೂ ಹಿಂದುಳಿದ ವರ್ಗ ಬಿ. ಕ್ಷೇತ್ರದಿಂದ ಡಿ.ಪಿ. ಸುರೇಶ್ ೨೦೧ ಮತಗಳನ್ನ ಪಡೆದು ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ಸುಂದರಮ್ಮ, ಕೆ.ಎಸ್. ೧೬೧ ಹಾಗೂ ಎನ್. ನೇತ್ರವತಿ ೧೪೬ ಮತಗಳನ್ನ ಆಯ್ಕೆಯಾಗಿದ್ದು ಸಾಲಗಾರರಲ್ಲದ ಕ್ಷೇತ್ರದಿಂದ ದಿವಾಕರ ಲಾಟರಿ ಮುಖಾಂತರ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ನಿರ್ದೇಶಕರನ್ನೂ ಪಪಂ ಸದಸ್ಯರಾದ ಕೆ.ಆರ್‌. ಓಬಳರಾಜು, ಮಾಜಿ ಉಪಾಧ್ಯಕ್ಷ ಮಂಜುನಾಥ್ ಮುಖಂಡರಾದ ಕುಮಾರ್, ಸಿದ್ದಲಿಂಗಪ್ಪ, ಜಯರಾಮ್, ಚಂದ್ರು, ದೊಡ್ಡಯ್ಯ, ಗಂಗಾಧರಪ್ಪ, ಕಾಕಿಮಲ್ಲಯ್ಯ, ಮಧು, ಲೋಕೇಶ್, ರಂಗಧಾಮಯ್ಯ ಸೇರಿದಂತೆ ಇತರರು ಇದ್ದರು.