ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರ ಆಯ್ಕೆ

| Published : Mar 18 2024, 01:50 AM IST

ಸಾರಾಂಶ

ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆ ಮಾರ್ಚ್ 15ರಂದು ನಿಗದಿಯಾಗಿತ್ತು. ಆದರೆ ಸರ್ಕಾರ ದಿಢೀರಾಗಿ ಚುನಾವಣೆಯನ್ನು ರದ್ದುಪಡಿಸಿ ಮುಂದೂಡಿ ಆದೇಶ ಹೊರಡಿಸಿತ್ತು. ಇದಕ್ಕೆ ರಾಜ್ಯ ಉಚ್ಚ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದು ಭಾನುವಾರ ಚುನಾವಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆದು ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.ಆಡಳಿತ ಮಂಡಳಿ ನಿರ್ದೇಶಕರಾಗಿ ಹಾಲಿ ಅಧ್ಯಕ್ಷ ಕೊಡಂದೇರ ಪಿ. ಗಣಪತಿ (ಬಾಂಡ್ ಗಣಪತಿ), ಕೆ.ಎಸ್ ಪೂವಯ್ಯ, ಹೊಸೂರು ಕೆ.ಸತೀಶ್ ಕುಮಾರ್, ಸತೀಶ್ ಎನ್. ಕಾಂಗೀರ, ರಮೇಶ್ ಎಚ್.ಎಂ., ಪೂಳಂಡ ಪಿ. ಪೆಮ್ಮಯ್ಯ, ಕೆ.ಬಿ. ಅರುಣ, ಎಚ್.ಕೆ. ಮಾದಪ್ಪ, ಎನ್.ಸಿ. ಶರತ್ ಶೇಖರ್, ಎನ್.ಎಂ. ಉತ್ತಪ್ಪ, ಗುಮ್ಮಟ್ಟೀರ ಎಸ್. ಕಿಲನ್ ಗಣಪತಿ, ಶರವಣ ಕುಮಾರ್ ಟಿ.ಆರ್., ಜಲಜಾಕ್ಷಿ ವೈ.ಪಿ. ಆಯ್ಕೆಗೊಂಡಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಚುನಾವಣೆಯ ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ.ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆ ಮಾರ್ಚ್ 15ರಂದು ನಿಗದಿಯಾಗಿತ್ತು. ಆದರೆ ಸರ್ಕಾರ ದಿಢೀರಾಗಿ ಚುನಾವಣೆಯನ್ನು ರದ್ದುಪಡಿಸಿ ಮುಂದೂಡಿ ಆದೇಶ ಹೊರಡಿಸಿತು. ಹಾಲಿ ಅಧ್ಯಕ್ಷ ಬಾಂಡ್ ಗಣಪತಿ ಅವರು ಅವಿರೋಧವಾಗಿ ಆಯ್ಕೆಗೊಂಡ ಗುಮ್ಮಟ್ಟೀರ ಕಿಲನ್ ಗಣಪತಿ ಮೂಲಕ ಸರ್ಕಾರದ ಆದೇಶದ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದು ಭಾನುವಾರ ಚುನಾವಣೆ ನಡೆಯಿತು.ವಿಶೇಷವೆಂದರೆ ಬಿಜೆಪಿ ಪಕ್ಷದ ಪ್ರಮುಖರೇ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದರು. ಕೊನೆಗೆ ಹಾಲಿ ಅಧ್ಯಕ್ಷ ಬಾಂಡ್ ಗಣಪತಿಯ ಅವರ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.