ಸಾರಾಂಶ
ಗೆಜ್ಜಲಗೆರೆಯಲ್ಲಿ ಚಳವಳಿ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿ ನವೆಂಬರ್ 24ಕ್ಕೆ 42 ವರ್ಷಗಳು ಸಂದಿದೆ. ಈ ಹಿನ್ನೆಲೆಯಲ್ಲಿ ಭಾರತೀನಗರದಲ್ಲಿ ತಾಲೂಕು ಮಟ್ಟದ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ವೃತ್ತ ಸಮಿತಿ ರಚನೆಯನ್ನ ಕೂಡ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ರೈತ ಸಂಘವನ್ನು ಬಲಗೊಳಿಸಲು ನಡೆದ ಕಾರ್ಯಕರ್ತರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ರಾಜ್ಯ ರೈತ ಸಂಘದ ಮುಖಂಡ ಬೋರಾಪುರ ಶಂಕರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾದ್ಯಂತ ರೈತ ಸಂಘವನ್ನು ಬಲಿಷ್ಟಗೊಳಿಸಲು ಕಾರ್ಯಕರ್ತರು ಮುಂದಾಗಬೇಕು ಎಂದರು.
ಗೆಜ್ಜಲಗೆರೆಯಲ್ಲಿ ಚಳವಳಿ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿ ನವೆಂಬರ್ 24ಕ್ಕೆ 42 ವರ್ಷಗಳು ಸಂದಿದೆ. ಈ ಹಿನ್ನೆಲೆಯಲ್ಲಿ ಭಾರತೀನಗರದಲ್ಲಿ ತಾಲೂಕು ಮಟ್ಟದ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ವೃತ್ತ ಸಮಿತಿ ರಚನೆಯನ್ನ ಕೂಡ ಮಾಡಲಾಗಿದೆ ಎಂದರು.ರೈತರಲ್ಲಿ ಯಾವುದೇ ಒಡಕು ಉಂಟಾಗಬಾರದು. ಸಂಘಟನೆಗೆ ಪ್ರತಿಯೊಬ್ಬರು ಮುಂದಾಗಬೇಕು. ಆಗ ಮಾತ್ರ ಸರ್ಕಾರಿ ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯ ಎಂದರು.
ವೃತ್ತ ಸಮಿತಿ ಅಧ್ಯಕ್ಷರಾಗಿ ಕಳ್ಳಿಮೆಳೇದೊಡ್ಡಿ ಸಿದ್ಧರಾಜು, ಗೌರವಾಧ್ಯಕ್ಷ ಬೊಮ್ಮನಹಳ್ಳಿ ರಮೇಶ್, ಉಪಾಧ್ಯಕ್ಷರಾಗಿ ದೊಡ್ಡಅರಸಿನಕೆರೆ ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಬೊಪ್ಪಸಮುದ್ರ, ಕಾರ್ಯದರ್ಶಿಯಾಗಿ ಕ್ಯಾತಘಟ್ಟ ಸತೀಶ್, ಖಜಾಂಚಿಯಾಗಿ ಅಣ್ಣೂರು ರಾಜೇಶ, ಸಂಘಟನಾ ಕಾರ್ಯದರ್ಶಿಯಾಗಿ ಕೂಳಗೆರೆ ವೆಂಕಟೇಶ್, ಸಂಚಾಲಕರಾಗಿ ಸಂಚಾಲಕರು ರಾಜಣ್ಣ ಅರೆಕಲ್ಲುದೊಡ್ಡಿ, ನಿರ್ದಶಕರುಗಳಾಗಿ ಅಂಬರಹಳ್ಳಿ ಸಿದ್ದೇಗೌಡ, ಕೆ. ಶೆಟ್ಟಹಳ್ಳಿ ಚೌಡೇಗೌಡ, ಮಾದರಹಳ್ಳಿ ನಾಗಳಿಂಗು, ಡಿ.ಎ. ಕರೆ ಶಂಕರ್, ಗುರುದೇವರಹಳ್ಳಿ ಮಧು, ಹರಳಹಳ್ಳಿ ನಾಗರಾಜು ಆಯ್ಕೆಗೊಂಡಿದ್ದು, ಇವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಸಭೆಯಲ್ಲಿ ರೈತಸಂಘದ ಜಿಲ್ಲ ಘಟಕದ ಉಪಾಧ್ಯಕ್ಷ ಶಂಕರ್, ಕಾರ್ಯದರ್ಶಿ ಗೆಜ್ಜಲಗೆರೆ ಲಿಂಗಪ್ಪಾಜಿ, ಖಜಾಂಚಿ ರವಿಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ವಿ.ಸಿ.ಉಮೇಶ್, ಕಾರ್ಯಾಧ್ಯಕ್ಷ ಡಿ.ಕೆ.ಚಂದ್ರು, ಮುಖಂಡರಾದ ಯಡಗನಹಳ್ಳಿ ರಾಮೇಗೌಡ, ಮಠದದೊಡ್ಡಿ ಕೆಂಪೇಗೌಡ, ಗೂಳೂರು ರಾಮಕೃಷ್ಣ ಸೇರಿದಂತೆ ಹಲವರಿದ್ದರು.