ಸ್ವಜಾಗೃತಿ ಇದ್ದಲ್ಲಿ ಸೈಬರ್‌ ವಂಚನೆಗಳಿಂದ ರಕ್ಷಣೆ ಸಾಧ್ಯ

| Published : Nov 13 2024, 12:47 AM IST

ಸ್ವಜಾಗೃತಿ ಇದ್ದಲ್ಲಿ ಸೈಬರ್‌ ವಂಚನೆಗಳಿಂದ ರಕ್ಷಣೆ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಯಂ ಜಾಗ್ರತಿ ಬುದ್ಧಿ, ಚತುರತೆಯಂಥ ಪ್ರತಿಭೆಗಳಿದ್ದಲ್ಲಿ ಆನ್‌ಲೈನ್ ಮುಖಾಂತರ ವಂಚಿಸುವ ಯಾವುದೇ ಸೈಬರ್ ಅಪರಾಧಗಳಿಗೆ ಒಳಗಾಗದೇ ನಮ್ಮ ಸುರಕ್ಷತೆ ಸಾಧ್ಯವಾಗುವುದು ಎಂದು ಬೆಳಗಾವಿ ವಿಟಿಯು ಶೈಕ್ಷಣಿಕ ಸೆನೆಟ್ ಸದಸ್ಯ, ಚಿಕ್ಕಬಳ್ಳಾಪುರ ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಚಾರ್ಯ ಡಾ. ಜಿ.ಟಿ.ರಾಜು ಹೇಳಿದ್ದಾರೆ.

- ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂಗೆ ಚಾಲನೆ ನೀಡಿ ಪ್ರಾಚಾರ್ಯ ಡಾ. ಜಿ.ಟಿ.ರಾಜು ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ವಯಂ ಜಾಗ್ರತಿ ಬುದ್ಧಿ, ಚತುರತೆಯಂಥ ಪ್ರತಿಭೆಗಳಿದ್ದಲ್ಲಿ ಆನ್‌ಲೈನ್ ಮುಖಾಂತರ ವಂಚಿಸುವ ಯಾವುದೇ ಸೈಬರ್ ಅಪರಾಧಗಳಿಗೆ ಒಳಗಾಗದೇ ನಮ್ಮ ಸುರಕ್ಷತೆ ಸಾಧ್ಯವಾಗುವುದು ಎಂದು ಬೆಳಗಾವಿ ವಿಟಿಯು ಶೈಕ್ಷಣಿಕ ಸೆನೆಟ್ ಸದಸ್ಯ, ಚಿಕ್ಕಬಳ್ಳಾಪುರ ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಚಾರ್ಯ ಡಾ. ಜಿ.ಟಿ.ರಾಜು ಹೇಳಿದರು.

ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಸೋಮವಾರ ಇನ್‌ಫಾರ್ಮೇಷನ್‌ ಎಂಜಿನಿಯರಿಂಗ್ ವಿಭಾಗದಿಂದ ಆಯೋಜಿಸಲಾಗಿದ್ದ ಅಟಲ್ ಪ್ರಾಯೋಜಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಾಟ್ಸಪ್, ಫೇಸ್‌ಬುಕ್, ಜಿ-ಮೇಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಮಾಹಿತಿಗಾಗಿ ಎಷ್ಟು ಅವಶ್ಯಕವೋ, ಅಷ್ಟು ಮಾತ್ರ ಬಳಸಬೇಕು. ಈ ವೇಳೆ ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಅಷ್ಟೇ ಅಪಾಯಕಾರಿಯೂ ಆಗಲಿವೆ. ಪ್ರಸ್ತುತ ತಂತ್ರಜ್ಞಾನ ಬೆಳೆದಂತೆ ಅವಶ್ಯಕತೆ ಅನಿವಾರ್ಯವಾಗಿದೆ. ಶಿಕ್ಷಣ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆನ್‌ಲೈನ್ ಮುಖಾಂತರ ವ್ಯವಹಾರ, ಸಂವಹನ ಬಳಕೆ ಹೆಚ್ಚುತ್ತಿವೆ. ಇದರ ಪರಿಣಾಮ ಆನ್‌ಲೈನ್ ಮುಖಾಂತರ ವಂಚಿಸುವ ಸೈಬರ್ ಅಪರಾಧಗಳು ಸಹ ನಡೆಯುತ್ತಿವೆ. ಈ ಬಗ್ಗೆ ಸೂಕ್ತ ಜ್ಞಾನ ಹಾಗೂ ಸಮಯಪ್ರಜ್ಞೆ ಮುಖ್ಯವಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳ ಮತ್ತು ಆನ್‌ಲೈನ್ ಬಳಕೆ ಮಾಡಿಕೊಳ್ಳುವಾಗ ಅಲ್ಲಿನ ಯಾವುದೇ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಸಂಬಂಧಪಡದ ವಿಷಯಗಳು, ಅಪರಿಚಿತ ವ್ಯಕ್ತಿಗಳ ಬಗ್ಗೆ ಕಿವಿಗೊಡದೇ ಜಾಗೃತಿ ವಹಿಸಬೇಕು. ಆಗ ಆನ್‌ಲೈನ್ ವಂಚನೆಯಿಂದ ದೂರ ಉಳಿಯಬಹುದು ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ ವಿಟಿಯು ಪಿಹೆಚ್ಡಿ ವಿಭಾಗದ ವಿಶೇಷಅಧಿಕಾರಿ ಡಾ.ವಿರೂಪಾಕ್ಷಪ್ಪ ಬೆಟಗೇರಿ ಮಾತನಾಡಿ, ತಂತ್ರಜ್ಞಾನ ಮುಂದುವರಿದಂತೆ ಅದರ ಬಳಕೆ ಸಹ ಅಷ್ಟೇ ಅವಶ್ಯಕತೆವಾಗುತ್ತಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಮುಖಾಂತರ ಸೈಬರ್ ವಂಚನೆಗಳು ಸಾಕಷ್ಟು ನಡೆಯುತ್ತಿವೆ. ಈ ವಂಚನೆಗಳನ್ನು ತಪ್ಪಿಸುವ ಸಲುವಾಗಿಯೇ ಪೊಲೀಸ್ ಇಲಾಖೆಯಿಂದ ಅದಕ್ಕೆ ಪ್ರತ್ಯೇಕವಾದಂತಹ ಸೈಬರ್ ಅಪರಾಧ ವಿಭಾಗ ಎಂಬುದನ್ನು ಸ್ಥಾಪಿಸಲಾಗಿದೆ. ವಂಚನೆಗೆ ಒಳಗಾಗುವ ತನಕ ವಂಚಿಸುವುದು ತಪ್ಪೋದಿಲ್ಲ. ಹಾಗಾಗಿ, ತಂತ್ರಜ್ಞಾನ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ವೇಳೆ ನಮಗೆ ನಾವೇ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ. ಸಂಜಯ ಪಾಂಡೆ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಜಿಎಂ ವಿವಿ ಮತ್ತು ಎಫ್‌ಡಿಪಿ ಸಂಚಾಲಕ ಡಾ. ಎಂ.ವೀರಗಂಗಾಧರ ಸ್ವಾಮಿ, ಡಾ. ಕೆ.ಎನ್. ಭರತ್, ಪ್ರೊ.ಸೌಮ್ಯ ಎತ್ತಿನಹಳ್ಳಿ, ಟಿ.ಆರ್.ತೇಜಸ್ವಿ ಕಟ್ಟಿಮನಿ, ಸೌಮ್ಯ, ಪ್ರೊ.ಇಮ್ರಾನ್‌ ಖಾನ್, ಗಗನ್ ದೀಪ್, ರಕ್ಷಿತಾ, ಡಾ.ನೀಲಾಂಬಿಕೆ ಇತರರು ಇದ್ದರು.

- - - -11ಕೆಡಿವಿಜಿ39:

ದಾವಣಗೆರೆ ಜಿಎಂಐಟಿ ಕಾಲೇಜಿನಲ್ಲಿ ಅಟಲ್ ಪ್ರಾಯೋಜಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂಗೆ ಡಾ. ಜಿ.ಟಿ.ರಾಜು ಚಾಲನೆ ನೀಡಿದರು.