ಸಾರಾಂಶ
ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ/ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ವಿವಿಧ ತರಬೇತಿ ನಡೆಯಲಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಅ.15ರಿಂದ ಅ.24ರ ವರೆಗೆ 10 ದಿನ ಅವಧಿಯಲ್ಲಿ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿ, ಅ.21 ರಿಂದ ಅ.30 ರವರೆಗೆ 10 ದಿನ ಅವಧಿಯಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ, ನವೆಂಬರ್ 6ರಿಂದ ಡಿಸೆಂಬರ್ 5ರ ವರೆಗೆ 30 ದಿನದ ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ) ತರಬೇತಿ, ನ. 11 ರಿಂದ 20ರ ವರಗೆ 10 ದಿನದ ಜೇನು ಕೃಷಿ ತರಬೇತಿ, ಡಿಸೆಂಬರ್ 1ರಿಂದ 30ರ ವರೆಗೆ 30 ದಿನಗಳ ದ್ವಿ ಚಕ್ರ ವಾಹನಗಳ ರಿಪೇರಿ (ಬೈಕ್) ತರಬೇತಿ, ಡಿ.14ರಿಂದ ಜನವರಿ 13ರ ವರೆಗೆ 30 ದಿನದ ಅವಧಿಯಲ್ಲಿ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ ತರಬೇತಿ ನಡೆಯಲಿದೆ.ಅಭ್ಯರ್ಥಿಗಳ ವಯೋಮಿತಿ 18 ರಿಂದ 45 ವರ್ಷ ಇದ್ದು, ಆಸಕ್ತರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ತರಬೇಕು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ/ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ( ಧರ್ಮಸ್ಥಳದ ಹತ್ತಿರ)-574240 ಸಂಪರ್ಕಿಸಬಹುದಾಗಿದೆ. 08256-236404, ವಾಟ್ಸಪ್ ನಂ: 6364561982 , ವಾಟ್ಸಪ್ ಮೂಲಕ ಹಾಗೂ Online website : rudsetujire.com ಮೂಲಕವೂ ಅರ್ಜಿ ಸಲ್ಲಿಸಬಹುದು. ಅಲ್ಲದೆhttps://forms.gle/Z2xPLE1FigamcMBd9 ಈ ಗೂಗಲ್ ಫಾರಂ ಲಿಂಕ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.