ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು: ಸುರೇಶ್ ಬಾಬು

| Published : Mar 22 2025, 02:02 AM IST

ಸಾರಾಂಶ

ಮಹಿಳೆಯರ ಸ್ವಾವಲಂಭನೆ ಬದುಕು ರಾಷ್ಟ್ರದ ಅಭಿವೃದ್ಧಿಯ ಸಂಕೇತ. ಗುಡಿ ಕೈಗಾರಿಕೆಗಳಾದ ಮೇಣದ ಬತ್ತಿತಯಾರಿಕೆ, ಗಂಧದ ಕಡ್ಡಿ, ಊಟದ ಎಲೆ, ಊಟದ ಪ್ಲೇಟ್, ಪಿನಾಯಲ್, ಬ್ಲೀಚಿಂಗ್‌ ಪೌಡರ್‌ತ ಯಾರಿಕೆಯಂತಹ ಸಣ್ಣ ಉದ್ಯಮ ಆರಂಭಿಸಿ ಹೆಚ್ಚು ಲಾಭಗಳಿಸಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಗುಡಿ ಕೈಗಾರಿಕೆಯಂತಹ ಹಲವು ಸ್ವಯಂಉದ್ಯೋಗ ಮಾಡುವಂತೆ ಲಕ್ಷ್ಮಿಪುರ ಗ್ರಾಪಂ ಪಿಡಿಒ ಸುರೇಶ್ ಬಾಬು ಹೇಳಿದರು.

ಗ್ರಾಮದಲ್ಲಿ ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆ ಮತ್ತು ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಮಹಿಳೆಯರ ಸ್ವಾವಲಂಭನೆ ಬದುಕು ರಾಷ್ಟ್ರದ ಅಭಿವೃದ್ಧಿಯ ಸಂಕೇತ. ಗುಡಿ ಕೈಗಾರಿಕೆಗಳಾದ ಮೇಣದ ಬತ್ತಿತಯಾರಿಕೆ, ಗಂಧದ ಕಡ್ಡಿ, ಊಟದ ಎಲೆ, ಊಟದ ಪ್ಲೇಟ್, ಪಿನಾಯಲ್, ಬ್ಲೀಚಿಂಗ್‌ ಪೌಡರ್‌ತ ಯಾರಿಕೆಯಂತಹ ಸಣ್ಣ ಉದ್ಯಮ ಆರಂಭಿಸಿ ಹೆಚ್ಚು ಲಾಭಗಳಿಸುವಂತೆ ಸಲಹೆ ನೀಡಿದರು.

ಬ್ಯಾಂಕ್‌ ಆಫ್ ಬರೋಡಾ ಕಳೆದ 25 ವರ್ಷಗಳಿಂದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಕೌಶಲ ತರಬೇತಿ ನೀಡುತ್ತಿದೆ. ಉದ್ಯಮಕ್ಕೆ ಸಬ್ಸಿಡಿ ಕೂಡ ಸಿಗಲಿದೆ. ಮಹಿಳೆಯರು ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಗ್ರಾಪಂ ವ್ಯಾಪ್ತಿಸ್ವ ಸಹಾಯ ಸಂಘ ರಚಿಸಿಕೊಂಡು ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಬಿಎಸ್‌ವಿಎಸ್ ಸುಶ್ಮಿತಾ, ವಲಯ ಮೇಲ್ಚಿಚಾರಕ ನಂಜುಂಡಯ್ಯ, ಐಸಿಐಸಿಐ ಫೌಂಡೇಷನ್ ನಾಗರಾಜೇಗೌಡ, ಅಧಿಕ್ಷಕ ಸಾಕ್ಷರತಾ ಸಂಯೋಜಕ ಪ್ರಮೋದ್, ತಾಲೂಕು ವ್ಯವಸ್ಥಾಪಕ ಪ್ರದೀಪ್, ಒಕ್ಕೂಟದ ಅಧ್ಯಕ್ಷ ಶೈಲಜಾ, ಸಂಪನ್ಮೂಲ ವ್ಯಕ್ತಿ ಕನ್ಯಾಕುಮಾರಿ, ರೋಜಾ, ಕೃಷಿ ಸಖಿ ಸುಮಿತ್ರಾ, ಪಶು ಸಖಿ ಚಂದ್ರಕಲಾ ಆಟೋಡ್ರೈವರ್‌ ರೂಪಾ, ಮುಖ್ಯ ಪುಸ್ತಕ ಬರಹಗಾರ ಮಂಜುಳಾ ಇದ್ದರು.