ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಭಾರತೀಯ ಗಣಿತ ಶಾಸ್ತ್ರವು ಅಪಾರ ಪ್ರಭಾವ ಬೀರಿದೆ.
ಕನ್ನಡಪ್ರಭ ವಾರತೆ ಮೈಸೂರುಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಭಾರತೀಯ ಗಣಿತ ಶಾಸ್ತ್ರವು ಅಪಾರ ಪ್ರಭಾವ ಬೀರಿದೆ ಎಂದು ಮೈಸೂರು ವಿವಿ ಗಣಿತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್, ರಂಗರಾಜನ್ ಅವರು ಅಭಿಪ್ರಾಯಪಟ್ಟರು.ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗಣಿತಶಾಸ್ತ್ರ ವಿಭಾಗದ ವತಿಯಿಂದ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯ ಗಣಿತಶಾಸ್ತ್ರ ವಿಷಯ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಭಾರತೀಯ ಗಣಿತ ಶಾಸ್ತ್ರವು ಅಪಾರ ಪ್ರಭಾವ ಬೀರಿದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕೆಯನ್ನು ಪ್ರೇರೇಪಿಸಬೇಕು. ವಿದ್ಯಾರ್ಥಿಗಳು ಕೇವಲ ಕಂಠಪಾಠ ಮಾಡುವುದರ ಬದಲಾಗಿ ಸೈದ್ಧಾಂತಿಕ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವತ್ತ ಗಮನಹರಿಸಬೇಕು ಎಂದು ತಿಳಿಸಿದರು.ಭಾರತದ ಶ್ರೀಮಂತ ಗಣಿತ ಪರಂಪರೆಯನ್ನು ಸ್ಮರಿಸಿದ ಅವರು, ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ ಮತ್ತು ಶ್ರೀನಿವಾಸ ರಾಮಾನುಜನ್ ಅವರಂತಹ ಮಹಾನ್ ಭಾರತೀಯ ಗಣಿತಜ್ಞರು ಗಣಿತಶಾಸ್ತ್ರದ ಮೂಲ ಪರಿಕಲ್ಪನೆ ಹಾಗೂ ಅನ್ವಯಿಕೆಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರಿನ ಯುವರಾಜ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಂ. ರೂಬಿ ಸಾಲೆಸ್ಟಿನಾ ಅವರು ಮಾತನಾಡಿ, ಗಣಿತಶಾಸ್ತ್ರದ ಅನಿವಾರ್ಯತೆ ಮತ್ತು ಮಹತ್ವವನ್ನು ಕುರಿತು ತಿಳಿಸಿದರು. ಗಣಿತವೇ ಜೀವನ ವಿಧಾನ. ಸಂಖ್ಯಾಶಾಸ್ತ್ರದ ಜ್ಞಾನವಿಲ್ಲದೆ ಆಧುನಿಕ ಜೀವನ ಅಸಾಧ್ಯ. ವಿದ್ಯಾರ್ಥಿಗಳು ಕೇವಲ ಬಾಹ್ಯ ಅನ್ವಯಿಕೆಗಳ ಬೆನ್ನು ಬೀಳದೆ, ಮೂಲ ತಾರ್ಕಿಕ ಚಿಂತನೆ ಮತ್ತು ತಾರ್ಕಿಕ ಆಧಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ ಅಧ್ಯಕ್ಷತೆವಹಿಸಿ ಮಾತನಾಡಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಲ್. ಪ್ರತಿಭಾ ಅರಸ್ ಮತ್ತು ತಡಂದವರು ಪಾಲ್ಗೊಂಡಿದ್ದರು.ಧಾತ್ರಿ ಮತ್ತು ತಂಡದವರು ಪ್ರಾರ್ಥಿಸಿದರು. ಸಿ. ದೀಕ್ಷಾ ಸ್ವಾಗತಿಸಿದರು. ಕೆ.ಕೆ. ಸೌಜನ್ಯಾ ವಂದಿಸಿದರು. ಬಿ.ಎಸ್. ಮಾನನಾ ನಿರೂಪಿಸಿದರುಉದ್ಘಾಟನಾ ಕಾರ್ಯಕ್ರಮದ ನಂತರ ಮೂರು ತಾಂತ್ರಿಕ ಗೋಷ್ಠಿಗಳು ನಡೆಯಿತು.ಮೊದಲನೇ ಗೋಷ್ಠಿ ಮೈಸೂರಿನ ಯುವರಾಜ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಂ. ರೂಬಿ ಸಾಲೆಸ್ಟಿನಾ ಅವರು "ಕೃತಕ ಬುದ್ಧಿ ಮತ್ತೆ ಮತ್ತು ಗಣಿತಶಾಸ್ತ್ರ ವಿಷಯ ಕುರಿತು ಉಪನ್ಯಾಸ ನೀಡಿದರು.ಎರಡನೇ ಗೋಷ್ಠಿಯಲ್ಲಿ ಡಿಜಿಟಲ್ ಯುಗದಲ್ಲಿ ಶೂನ್ಯ ಮತ್ತು ಅನಂತತೆಯ ತತ್ವಶಾಸ್ತ್ರ ವಿಷಯ ಕುರಿತು ತುಮಕೂರು ವಿವಿಯ ಸ್ನಾತಕೋತ್ತರ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್.ಎಸ್. ಬೋರೇಗೌಡ ಮಾತನಾಡಿದರು.ಮೂರನೇ ಗೋಷ್ಠಿಯಲ್ಲಿ ಎನ್‌ಐಇ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶಿವರಾಜ್‌ಕುಮಾರ್ ಅವರು ಕ್ರಿಪ್ಟೋಗ್ರಫಿಯಲ್ಲಿ ಫೈನೈಟ್ ಗ್ರೂಪ್ಸ್ ವಿಷಯ ಕುರಿತು ಉಪನ್ಯಾಸ ನೀಡಿದರು.