ಮಣಿಪಾಲ ಕೆ.ಎಂ.ಸಿ.ಯಲ್ಲಿ ‘ಗುರಿ-ನಿರ್ದೇಶಿತ ರಕ್ತಸ್ರಾವ ನಿರ್ವಹಣೆ’ ವಿಚಾರ ಸಂಕಿರಣ

| Published : Jan 20 2025, 01:30 AM IST

ಮಣಿಪಾಲ ಕೆ.ಎಂ.ಸಿ.ಯಲ್ಲಿ ‘ಗುರಿ-ನಿರ್ದೇಶಿತ ರಕ್ತಸ್ರಾವ ನಿರ್ವಹಣೆ’ ವಿಚಾರ ಸಂಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇಮ್ಯುನೊಹೆಮಟಾಲಜಿ ಮತ್ತು ರಕ್ತ ಪೂರಣ ವಿಭಾಗವು ವರ್ಫೆನ್ ಅಕಾಡೆಮಿಯ ಸಹಯೋಗದೊಂದಿಗೆ ‘ಗುರಿ-ನಿರ್ದೇಶಿತ ರಕ್ತಸ್ರಾವ ನಿರ್ವಹಣೆ’ (ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್) ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇಮ್ಯುನೊಹೆಮಟಾಲಜಿ ಮತ್ತು ರಕ್ತ ಪೂರಣ ವಿಭಾಗವು ವರ್ಫೆನ್ ಅಕಾಡೆಮಿಯ ಸಹಯೋಗದೊಂದಿಗೆ ‘ಗುರಿ-ನಿರ್ದೇಶಿತ ರಕ್ತಸ್ರಾವ ನಿರ್ವಹಣೆ’ (ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್) ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು.

ರಕ್ತಸ್ರಾವ ನಿರ್ವಹಣೆಯಲ್ಲಿ ಅತ್ಯಾಧುನಿಕ ತಂತ್ರಗಳ ಬಳಕೆ, ರೋಗಿಯ ರಕ್ತ ನಿರ್ವಹಣೆ (ಪಿಬಿಎಂ) ಮತ್ತು ರೊಟೇಶನಲ್ ಥ್ರಂಬೋಎಲಾಸ್ಟೊಮೆಟ್ರಿ (ರೋಟಮ್) ಕುರಿತು ವಿಚಾರಸಂಕಿರಣವು ವಿಶೇಷ ಬೆಳಕು ಚೆಲ್ಲಿತು.

ವಿಚಾರ ಸಂಕಿರಣವನ್ನು ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಎಂಸಿಯ ಅಸೋಸಿಯೇಟ್ ಡೀನ್ ಡಾ. ಅನಿಲ್ ಭಟ್, ವೆರ್ಫೆನ್ ಅಕಾಡೆಮಿಯ ಡಾ. ಅಜಯ್ ಗಾಂಧಿ, ಐಎಚ್‌ಬಿಟಿ ಪ್ರಾಧ್ಯಾಪಕ ಡಾ. ಶಮೀ ಶಾಸ್ತ್ರಿ ಮತ್ತು ಮುಖ್ಯಸ್ಥ ಡಾ. ಗಣೇಶ್ ಮೋಹನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಸಂವಾದ, ಚರ್ಚೆಗಳು, ಪ್ರೇಕ್ಷಕರ ಸಮೀಕ್ಷೆಗಳ ಮೂಲಕ ನೈಜ- ಕ್ಲಿನಿಕಲ್ ಸನ್ನಿವೇಶಗಳನ್ನು ವಿಶ್ಲೇಷಿಸಲು ಅವಕಾಶ ಮಾಡಿಕೊಡವಾಯಿತು. ರೋಗಿಗಳ ಅನಾರೋಗ್ಯ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವಾಗ, ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ಪಿಬಿಎಂ ಸಾಮರ್ಥ್ಯದ ಕುರಿತು ವಿಚಾರ ವಿನಿಮಯ ಮಾಡಲಾಯಿತು.