ನಾಳೆ ಕಟ್ಟಿಮನಿ ಕಥನ ಸಾಹಿತ್ಯ ಕುರಿತು ವಿಚಾರ ಸಂಕಿರಣ

| Published : Feb 26 2024, 01:32 AM IST

ಸಾರಾಂಶ

ಬಸವರಾಜ ಕಟ್ಟಿಮನಿ ಕಥನ ಸಾಹಿತ್ಯದಲ್ಲಿ ಸಾಮಾಜಿಕ ವಾಸ್ತವಿಕತೆಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಫೆ.27 ರಂದು ಆಯೋಜಿಸಲಾಗಿದೆ.

ಗಂಗಾವತಿ: ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿ ಹಾಗೂ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬಸವರಾಜ ಕಟ್ಟಿಮನಿ ಕಥನ ಸಾಹಿತ್ಯದಲ್ಲಿ ಸಾಮಾಜಿಕ ವಾಸ್ತವಿಕತೆಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಫೆ.27 ರಂದು ಆಯೋಜಿಸಲಾಗಿದೆ.ಬೆಳಿಗ್ಗೆ 10.30ಕ್ಕೆ ಹಿರಿಯ ಸಾಹಿತಿ ಡಾ.ವಸುಂಧರಾ ಭೂಪತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಶಯ ಭಾಷಣವನ್ನು ಹೊಸತು ಪತ್ರಿಕೆ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಮಾಡಲಿದ್ದಾರೆ. ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ, ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಮುಮ್ತಾಜ್ ಬೇಗಂ, ಕನ್ನಡ ವಿಭಾಗದ ಮುಖ್ಯಸ್ಥೆ ಜಗದೇವಿ ಕಲಶೆಟ್ಟಿ ಉಪಸ್ಥಿತರಿರುವರು.ಮೊದಲನೇ ಗೋಷ್ಠಿಯಲ್ಲಿ ಡಾ.ರಾಜಪ್ಪ ದಳವಾಯಿ ಕಟ್ಟಿಮನಿ ಕಾದಂಬರಿಗಳಲ್ಲಿ ಬಂಡವಾಳಶಾಹಿ ರಾಜಕಾರಣ-ಧರ್ಮ '''''''' ಕುರಿತು, ಡಾ.ಅಮರೇಶ ನುಗಡೋಣಿ ಯವರು ''''''''ಕಟ್ಟಿಮನಿ ಕಥೆಗಳಲ್ಲಿ ಸಾಮಾಜಿಕ ವಾಸ್ತವತೆ'''''''' ಕುರಿತು, ಡಾ.ಸರ್ಜಾಶಂಕರ ಹರಳೀಮಠ ಮೈಸೂರು ''''''''ಅಲಕ್ಷಿತ ಸಮುದಾಯ ಮತ್ತು ಕಟ್ಟಿಮನಿ ಸಾಹಿತ್ಯ'''''''' ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಗೋಷ್ಠಿ ಎರಡರಲ್ಲಿ ವಿದ್ಯಾರ್ಥಿ ಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಪ್ರಶಾಂತ್, ನಾಗಮ್ಮ, ಗಿರಿಜಾ, ಹೊನ್ನೂರಪ್ಪ ಕಥೆಗಳ ಕುರಿತು ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಕೆ.ಆರ್. ದುರ್ಗಾದಾಸ ವಹಿಸಲಿದ್ದಾರೆ.ಮಧ್ಯಾಹ್ನ ಮೂರು ಗಂಟೆಗೆ ಸಮಾರೋಪ ಸಮಾರಂಭದಲಿ ಸಮಾರೋಪ ಭಾಷಣವನ್ನು ಅಲ್ಲಮಪ್ರಭು ಬೆಟ್ಟದೂರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಜಾಜಿ.ದೇವೇಂದ್ರಪ್ಪ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಲು ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ವಿನಂತಿಸಿದ್ದಾರೆ.