ಒಂದು ದೇಶ-ಒಂದು ಚುನಾವಣೆ ಕುರಿತ ವಿಚಾರ ಸಂಕಿರಣ

| Published : Oct 08 2024, 01:03 AM IST

ಸಾರಾಂಶ

‘ಒಂದು ದೇಶ- ಒಂದು ಚುನಾವಣೆ’ ಪ್ರಸ್ತಾವನೆ ನಿರಂಕುಶ ಪ್ರಜಾಪ್ರಭುತ್ವದತ್ತ ಭಾರತ ಈ ಕುರಿತು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಅ.9 ರಂದು ಅಯೋಜಿಸಿದೆ ಎಂದು ಸಿ.ರಾಜಣ್ಣ ಯರಿಯೂರು ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಡಿಎಸ್‌ಎಸ್‌ನ ಸಿ.ರಾಜಣ್ಣ ಮಾಹಿತಿ । ನಿ.ನ್ಯಾ.ನಾಗಮೋಹನ್‌ ಉದ್ಘಾಟನೆ

ಚಾಮರಾಜನಗರ: ಕೇಂದ್ರ ಸರ್ಕಾರದ ‘ಒಂದು ದೇಶ- ಒಂದು ಚುನಾವಣೆ’ ಪ್ರಸ್ತಾವನೆ ನಿರಂಕುಶ ಪ್ರಜಾಪ್ರಭುತ್ವದತ್ತ ಭಾರತ ಈ ಕುರಿತು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಅ.9 ರಂದು ಅಯೋಜಿಸಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ,ಬೆಂಗಳೂರು ಮಹಾರಾಣಿ ಕಾಲೇಜು ಪಕ್ಕ ಕೊಂಡಜ್ಜಿ ಬಸಪ್ಪ ಮೆಮೊರಿಯಲ್ ಹಾಲ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ವಿಚಾರ ಸಂಕಿರಣ ಅರಂಭವಾಗಲಿದ್ದು, ಕಾರ್ಯಕ್ರಮವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸುವರು, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಅಧ್ಯಕ್ಷತೆ ವಹಿಸುವವರು, ಅಂಕಣಕಾರ ಎ.ನಾರಾಯಣ್ ವಿಷಯಮಂಡನೆ ಮಾಡುವವರು ಎಂದು ಹೇಳಿದರು.

ಒಂದು ದೇಶ- ಒಂದು ಚುನಾವಣೆಗೆ ಖಂಡನೆ:

ಒಂದು ದೇಶ- ಒಂದು ಚುನಾವಣೆಯಿಂದ ನಿರಂಕುಶ ಪ್ರಜಾಪ್ರಭುತ್ವದತ್ತ ಭಾರತ ಸಾಗುತ್ತದೆ. ಗಣತಂತ್ರ ಹಾಗೂ ಜನತಂತ್ರದ ಬದಲು ಕೇಂದ್ರತ್ವದ ಸ್ಥಾಪನೆ, ಸರ್ವಾಧಿಕಾರದ ಸ್ಥಾಪನೆಯ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ, ಒಂದು ದೇಶ, ಒಂದು ಸಂಸ್ಕೃತಿ, ಒಂದು ಭಾಷೆ, ಒಬ್ಬ ನಾಯಕ, ಒಂದು ಚುನಾವಣೆ ಮನುವಾದಿ ಸಂಚಿನ ಮೋಡಿಯ ಮಾತುಗಳಾಗಿವೆ. ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಪ್ರಜಾತಂತ್ರ-ಸಂಸದೀಯ ಪ್ರಜಾಪ್ರಭುತ್ವವನ್ನು ತಿರುಚಿ ಸರ್ವಾಧಿಕಾರಿ ಆಡಳಿತಕ್ಕೆ ಎಡೆ ಮಾಡುವ ಅಧ್ಯಕ್ಷೀಯ ಮಾದರಿ ಪ್ರಜಾಪ್ರಭುತ್ವ ಜಾರಿಗೊಳಿಸುವ ಸಲುವಾಗಿ ಏಕ ಚುನಾವಣೆಯನ್ನು ಹೇರಲು ಹೊರಟಿದೆ ಎಂದು ದೂರಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ನಂಜುಂಡಸ್ವಾಮಿ, ಶಿವಕುಮಾರ್, ದೊರೆಸ್ವಾಮಿ ತಾಲೂಕು ಸಂಚಾಲಕ ಅನಿಲ್ ಕುಮಾರ್, ಗುಂಡ್ಲುಪೇಟೆ ತಾಲೂಕು ಸಂಚಾಲಕ ರಂಗಸ್ವಾಮಿ, ಕೊಳ್ಳೇಗಾಲ ತಾಲೂಕು ಸಂಚಾಲಕ ಶಾಂತರಾಜು, ಹಾಜರಿದ್ದರು.