ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ಮಹಿಳಾ ಸುರಕ್ಷತೆ ಕುರಿತು ವಿಚಾರ ಸಂಕಿರಣ

| Published : Sep 19 2024, 01:52 AM IST

ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ಮಹಿಳಾ ಸುರಕ್ಷತೆ ಕುರಿತು ವಿಚಾರ ಸಂಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣಗೊಳಿಸುವ ಉದ್ದೇಶದಿಂದ ಕಾನೂನು ನೆರವು ಮತ್ತು ಮಹಿಳೆಯರಿಗಾಗಿ ನೀತಿ ರೂಪಿಸಿದೆ. ಅವುಗಳ ಪರಿಣಾಮಕಾರಿ ಜಾರಿ ಸಂಬಂಧ ಚರ್ಚಿಸಲಾಗುತ್ತಿದ. ಪ್ರಮುಖವಾಗಿ ಮಹಿಳೆಯರ ಕೆಲಸದ ಸ್ಥಳ ಮತ್ತು ಸಾರ್ಜವಿಕ ಸ್ಥಗಳಲ್ಲಿನ ರಕ್ಷಣೆ ಸಂಬಂಧ ಹೆಚ್ಚು ಗಮನ ಹರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಭಾರತದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಕೈಗೊಳ್ಳಬಹುದಾದ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಯಿತು.

ನಗರದ ಮುರಳೀಧರ ಭಾಗವತ್ಚಾರಿಟಬಲ್ಫೌಂಡೇಷನ್ ಮತ್ತು ವೀರವ್ರತಮ್ಫೌಂಡೇಷನ್ ಆಯೋಜಿಸಿದ್ದ ಸಾರ್ವಜನಿಕ ಸ್ಥಳ ಮತ್ತು ಕೆಲಸದ ಸ್ಥಳದಲ್ಲಿನ ಮಹಿಳೆಯರ ಸುರಕ್ಷತೆ ಕುರಿತ ಈ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಲವು ಮಹಿಳಾ ಸಂಘಟನೆಗಳು ಪಾಲ್ಗೊಂಡಿದ್ದವು.

ಕೆ.ಆರ್.ಎಸ್ರಸ್ತೆಯ ಪೂಜಾ ಭಾಗವತ್ಸ್ಮಾರಕ ಮಹಾಜನ ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಆಯೋಗವು ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಿದೆ.

ದೇಶದ ದ್ವಿತೀಯ ದರ್ಜೆ ನಗರಗಳಲ್ಲಿ ಈ ವಿಚಾರ ಸಂಕರಣ ಆಯೋಜಿಸುವ ಉದ್ದೇಶದಿಂದ ಮೈಸೂರಿನಲ್ಲಿ ಆಯೋಜಿಸಿದ್ದು, ಕಾನೂನಿನ ಪರಿಣಾಮಕಾಗಿ ಜಾರಿಗೊಳಿಸಿ ಮಹಿಳಾ ಸುರಕ್ಷತೆಯನ್ನು ಹೆಚ್ಚು ಮಾಡುವ ಉದ್ದೇಶ ಹೊಂದಿದೆ.

ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆ ಹೆಚ್ಚಿಸಲು ಅಗತ್ಯವಿರುವ ಸಲಹೆ ಸೂಚನೆ ಪಡೆದರು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಆಯೋಗದ ಅಧ್ಯಕ್ಷೆ ವಿಜಯಾ ಭಾರತಿ ಸಯಾನಿ, ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣಗೊಳಿಸುವ ಉದ್ದೇಶದಿಂದ ಕಾನೂನು ನೆರವು ಮತ್ತು ಮಹಿಳೆಯರಿಗಾಗಿ ನೀತಿ ರೂಪಿಸಿದೆ. ಅವುಗಳ ಪರಿಣಾಮಕಾರಿ ಜಾರಿ ಸಂಬಂಧ ಚರ್ಚಿಸಲಾಗುತ್ತಿದ. ಪ್ರಮುಖವಾಗಿ ಮಹಿಳೆಯರ ಕೆಲಸದ ಸ್ಥಳ ಮತ್ತು ಸಾರ್ಜವಿಕ ಸ್ಥಗಳಲ್ಲಿನ ರಕ್ಷಣೆ ಸಂಬಂಧ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.

ಮಹಿಳೆಯರು ಅನುಭವಿಸುತ್ತಿರುವ ದೌರ್ಜನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲಹೆ, ಸೂಚನೆ ಪಡೆದರು. ಮಹಿಳಾ ಸುರಕ್ಷತೆ ಎಂಬುದು ಯಾರೋ ಒಬ್ಬರ ಜವಾಬ್ದಾರಿ ಅಲ್ಲ, ಅದು ಎಲ್ಲರ ಜವಾಬ್ದಾರಿ ಎಂಬುದು ಗಮನದಲ್ಲಿರಬೇಕು ಎಂದು ಅವರು ತಿಳಿಸಿದರು.

ಸಿಎಫ್ಟಿಆರ್ಐ ನಿರ್ದೇಶಕಿ ಡಾ. ಶ್ರೀದೇವಿ ಅನುಪಮಾ ಸಿಂಗ್, ಛಾಯಾ ನಂಜಪ್ಪ, ಮಾಜಿ ಸಚಿವ ಎಸ್.ಎ. ರಾಮದಾಸ್ಸೇರಿದಂತೆ ಅನೇಕರು ಸಲಹೆ ಸೂಚನೆ ನೀಡಿದರು.

ವೇದಿಕೆಯಲ್ಲಿ ತನಿಖಾ ವಿಭಾಗದ ಪ್ರಧಾನ ಡಿಜಿ ಅಜಯ್ ಭಟ್ನಾಗರ್, ಕಾನೂನು ವಿಭಾಗದ ರಿಜಿಸ್ಟ್ರಾರ್ ಜೋಗಿಂದರ್ಸಿಂಗ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಂಸ್ಥೆಯ ಅಧ್ಯಕ್ಷ ಟಿ. ಮುರಳೀಧರ ಭಾಗವತ್ ಪಾಲ್ಗೊಂಡಿದ್ದರು.