ಕನ್ನಡಪ್ರಭ ವಾರ್ತೆ ಬೈಲಹೊಂಗಲ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಾಮಾಜಿಕ ಚಿಂತನೆ, ಸಂಸ್ಕಾರ ಇಂದು ಅತ್ಯವಶ್ಯವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆಗಳ ಆಶ್ರಯದಲ್ಲಿ ತಾಲೂಕಿನ ಚಿವಟಗುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿನ ಅಂಗನವಾಡಿಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಾಮಾಜಿಕ ಚಿಂತನೆ, ಸಂಸ್ಕಾರ ಇಂದು ಅತ್ಯವಶ್ಯವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆಗಳ ಆಶ್ರಯದಲ್ಲಿ ತಾಲೂಕಿನ ಚಿವಟಗುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿನ ಅಂಗನವಾಡಿಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಿಶುಗಳ ಆರೈಕೆ, ಗರ್ಭಿಣಿ, ಹರಿಗೆಯಾದಂತ ಮಹಿಳೆಯರ ಅನುಕೂಲಕ್ಕಾಗಿ ಪ್ರಸೂತಿ ಆರೈಕೆ, ಮಾತೃಪೂರ್ಣ, ಭಾಗ್ಯಲಕ್ಷ್ಮೀ, ಗೃಹಲಕ್ಷ್ಮೀ ಸೇರಿದಂತೆ ಅನೇಕ ಮಹತ್ವಾಕಾಂಕ್ಷೆಯ ಕಾರ್ಯಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಮಾಡುತ್ತಿವೆ. ಬಡವರಿಗೆ ಈ ಯೋಜನೆಗಳು ಊರುಗೋಲಾಗಿದ್ದು, ಹೀಗಾಗಿ ಪಾಲಕರು ಶಿಶುಗಳನ್ನು ಸರ್ಕಾರಿ ಅಂಗನವಾಡಿಗಳಿಗೆ ಕಳುಹಿಸಿ ಲಾಭ ಪಡೆಯಬೇಕೆಂದರು. ತಾಲೂಕಾ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅರುಣಕುಮಾರ.ಎಸ್.ಬಿ ಮಾತನಾಡಿ, ರಾಜ್ಯ ಸರ್ಕಾರದ ಐಸಿಡಿಎಸ್ ಯೋಜನೆಯು ಮಹಿಳೆಯರ, ಮಕ್ಕಳ ಅಭಿವೃದ್ಧಿಗಾಗಿ ಕಳೆದ ಐವತ್ತು ವರ್ಷಗಳಿಂದ ಯೋಜನೆಗಳನ್ನು ರೂಪಿಸಿ ಅಪೌಷ್ಟಿಕತೆ ಮುಕ್ತ, ಶಿಶು ಮರಣ, ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸಲು ನಿರಂತರವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವುದು ಸಾಧನೆ. ಸಕ್ಷಮ ಅಂಗನವಾಡಿ ಯೋಜನೆಯಡಿ ಮಕ್ಕಳ ಕಲಿಕಾ ಉದ್ದೇಶದಿಂದ ಸ್ಮಾರ್ಟ ಟಿವಿ, ಆಟಿಕೆ ಸಾಮಾನುಗಳು, ಸುಸಜ್ಜಿತ ಕಟ್ಟಡ, ಶಾಲಾ ಪೂರ್ವ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯೆತೆ ನೀಡಲು ಎಲ್‌ಕೆಜಿ, ಯುಕೆಜಿ ಅಂಗನಾವಾಡಿ ಹಂತದಲ್ಲೇ ಜಾರಿಗೆಗೋಳಿಸಲು ಪ್ರಯತ್ನಿಸುತ್ತಿದೆ. ಮಹಿಳೆಯರ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರಕಾರ ಅಕ್ಕ ಪಡೆಯನ್ನು ಜಿಲ್ಲಾ ಮಟ್ಟದಲ್ಲಿ ರಚನೆ ಮಾಡಲಾಗಿದೆ. ನ.28 ರಿಂದ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘವನ್ನು ರಚನೆ ಮಾಡಿ ಮಹಿಳೆಯರ ಸ್ವಾವಲಂಭನೆಗೆ ನೆರವಾಗಲು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.ಈ ವೇಳೆ ತಾಪಂ ಇಒ ಸಂಜೀವ ಜುನ್ನೂರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹೇಶ ಹೂಲಿ, ಗ್ರಾಪಂ ಅಧ್ಯಕ್ಷ ಗಿರೀಶ ಮಲ್ಲೂರ, ಕಾರ್ಯದರ್ಶಿ ಆರ್.ಸಿ.ರೊಟ್ಟಿ, ಉಪಾಧ್ಯಕ್ಷ್ಯೆ ಭಾಗೀರಥಿ ಗೊರಕೊಳ್ಳ, ಗುತ್ತಿಗೆದಾರ ಲಕ್ಷ್ಮಣ ಪಾಟೀಲ, ಸದಸ್ಯರಾದ ಗುರುಬಸಪ್ಪ ಮಲ್ಲೂರು, ಮಹಾಂತಯ್ಯ ಹಿರೇಮಠ, ನಾಗಪ್ಪ ಸಂಗೊಳ್ಳಿ, ಸಿಡಿಪಿಒ ಕಚೇರಿ ವಲಯ ಮೇಲ್ವಚಾರಕಿ ವಿಜಯಲಕ್ಷ್ಮೀ ಮಾಡಮಗೇರಿ, ಶಾಲಾ ಸುಧಾರಣಾ ಸಮೀತಿಯ ಅಧ್ಯಕ್ಷ್ಯೆ ವಿದ್ಯಾ ಬಡಿಗೇರ, ಅಂಗನವಾಡಿ ಸಲಹಾ ಸಮಿತಿ ಅಧ್ಯಕ್ಷ್ಯೆಸವಿತಾ ಹರಿಜನ, ಗ್ರಾಮದ ಗೆಳೆಯರ ಬಳಗದ ಅಧ್ಯಕ್ಷ ಶಿವಾನಂದ ಕೆಂಚನಗೌಡ್ರ, ಅಂಗನವಾಡಿ ಕಾರ್ಯಕರ್ತೆರಾದ ಲಲಿತಾ ಕೆಂಚನಗೌಡ್ರ, ವಿಮಲಾ ಗಣಬಸಪ್ಪನವರ, ಕಲಾವತಿ ಹೊಸಮಠ, ಕಾಶವ್ವ ಗುರುವನ್ನವರ, ಸಹಾಯಕಿಯರಾದ ಸುವರ್ಣ ಕಲಗೌಡ್ರ, ಗೌರವ್ವ ಪರ್ವತಗೌಡರ ಉಪಸ್ಥಿತರಿದ್ದರು.ಸಿಆರ್‌ಪಿ ಎಸ್.ಎಸ್.ಪಾಟೀಲ ಸ್ವಾಗತಿಸಿದರು. ಶಿಕ್ಷಕ ಬಿ.ಎನ್.ಗುರುಕನ್ನವರ ನಿರೂಪಿಸಿದರು. ಪಿಡಿಒ ಎ.ಎನ್.ಮಿಜ್ಜಿ ವಂದಿಸಿದರು. ಜನಪ್ರತಿನಿಧಿ, ಅಧಿಕಾರಿಗಳನ್ನು, ಸಾಧಕರನ್ನು ಸನ್ಮಾನಿಸಲಾಯಿತು.