ಲಯನ್ಸ್ ಕ್ಲಬ್ ನಾಪೋಕ್ಲು ವತಿಯಿಂದ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಿದ ಲಯನ್ಸ್ ರೀಜನ್ ಮೀಟ್ ಸಮ್ಮೇಳನ ‘ಬೆಸುಗೆ’ಯಲ್ಲಿ ಕ್ಲಬ್ ನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲುಲಯನ್ಸ್ ಕ್ಲಬ್ ನಾಪೋಕ್ಲು ವತಿಯಿಂದ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಿದ ಲಯನ್ಸ್ ರೀಜನ್ ಮೀಟ್ ಸಮ್ಮೇಳನ ‘ಬೆಸುಗೆ’ಯಲ್ಲಿ ಕ್ಲಬ್ ನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಸದಸ್ಯರಾದ ಬೊಪ್ಪೇರ ಕಾವೇರಪ್ಪ ಹಾಗೂ ಸರ್ವೆ ಆಫ್ ಇಂಡಿಯಾ ನಿವೃತ ಅಧಿಕಾರಿ, ಕೇಟೋಳಿರ ಎಸ್. ಕುಟ್ಟಪ್ಪ ಅವರನ್ನು ಗೌರವಿಸಲಾಯಿತು.ಲಯನ್ಸ್ ಕ್ಲಬ್ ಗಳ ಪ್ರಾಂತೀಯ ಅಧ್ಯಕ್ಷ ಡಾ. ಕೋಟೆರ ಪಂಚಮ್ ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ರೊಟೇರಿಯನ್ ಜಿಲ್ಲಾ ಮಾಜಿ ರಾಜ್ಯಪಾಲ ಅಭಿನಂದನ್ ಬಿ. ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ಲಯನ್ಸ್ ಪ್ರಾಂತಿಯ ರಾಯಬಾರಿ ನವೀನ್ ಅಂಬೆಕಲ್, ವಲಯ ಅಧ್ಯಕ್ಷ ಬಿಂದ್ಯಾ ಗಣಪತಿ, ಸಿ.ಟಿ. ಅಪ್ಪಣ್ಣ, ನಟರಾಜ ಕೆಸ್ತೂರು, ಪ್ರಾಂತ್ಯ ಅಧ್ಯಕ್ಷರು, ಸಮ್ಮೇಳನ ಅಧ್ಯಕ್ಷರಾದ ಕೇಟೋಳಿರ ರತ್ನ ಚರ್ಮಣ್ಣ, ಕಾರ್‍ಯದರ್ಶಿ ಮುಕ್ಕಾಟಿರ ವಿನಯ್, ಖಜಾಂಚಿ ಎಳ್ತ ತಂಡ ಬಿ. ಬೋಪಣ್ಣ ಮತ್ತಿತರರಿದ್ದರು.