ಹಿರಿಯ ವಿದ್ಯಾರ್ಥಿಗಳಿಂದ ಶಾಲೆಗಳಿಗೆ ಉಚಿತ ಕಂಪ್ಯೂಟರ್ ಕೊಡುಗೆ

| Published : Jul 06 2025, 01:48 AM IST

ಹಿರಿಯ ವಿದ್ಯಾರ್ಥಿಗಳಿಂದ ಶಾಲೆಗಳಿಗೆ ಉಚಿತ ಕಂಪ್ಯೂಟರ್ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಪಟ್ಟಣದ ಎಂ.ಎಚ್.ಚೆನ್ನೇಗೌಡ ವಿದ್ಯಾ ನಿಲಯದ ಅಂಗ ಸಂಸ್ಥೆಗಳಾದ ಎಚ್.ಕೆ ಮರಿಯಪ್ಪ ಕಾನ್ವೆಂಟ್ ಗೆ ನಾಲ್ಕು ಕಂಪ್ಯೂಟರ್‌ಗಳು, ಜವಾಹರ್ ಪ್ರೌಢಶಾಲೆಗೆ ಎರಡು ಹಾಗೂ ಕಸ್ತೂರಿಬಾ ಉನ್ನತ ಪ್ರಾಥಮಿಕ ಶಾಲೆಗೆ ಎರಡು ಕಂಪ್ಯೂಟರ್ ಗಳನ್ನು ಎಂ.ಎಚ್.ಚೆನ್ನೇಗೌಡ ವಿದ್ಯಾನಿಲಯದ ಅಧ್ಯಕ್ಷ ಎಂ.ಸ್ವರೂಪ ಚಂದ್ರ ಮೂಲಕ ಕೊಡುಗೆಯಾಗಿ ನೀಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಶ್ರೀರಾಮಕೃಷ್ಣ ಆಶ್ರಮದ ಹಿರಿಯ ವಿದ್ಯಾರ್ಥಿಗಳು, ವಿವೇಕ ಚಿಂತನ ಸೇವಾ ಸೊಸೈಟಿ ಮೈಸೂರು ವತಿಯಿಂದ ಉಚಿತ ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದರು. ಪಟ್ಟಣದ ಎಂ.ಎಚ್.ಚೆನ್ನೇಗೌಡ ವಿದ್ಯಾ ನಿಲಯದ ಅಂಗ ಸಂಸ್ಥೆಗಳಾದ ಎಚ್.ಕೆ ಮರಿಯಪ್ಪ ಕಾನ್ವೆಂಟ್ ಗೆ ನಾಲ್ಕು ಕಂಪ್ಯೂಟರ್‌ಗಳು, ಜವಾಹರ್ ಪ್ರೌಢಶಾಲೆಗೆ ಎರಡು ಹಾಗೂ ಕಸ್ತೂರಿಬಾ ಉನ್ನತ ಪ್ರಾಥಮಿಕ ಶಾಲೆಗೆ ಎರಡು ಕಂಪ್ಯೂಟರ್ ಗಳನ್ನು ಎಂ.ಎಚ್.ಚೆನ್ನೇಗೌಡ ವಿದ್ಯಾನಿಲಯದ ಅಧ್ಯಕ್ಷ ಎಂ.ಸ್ವರೂಪ ಚಂದ್ರ ಮೂಲಕ ಕೊಡುಗೆಯಾಗಿ ನೀಡಿದರು.

ಅಲ್ಲದೇ, ಕಮಲ ನೆಹರು ಬಾಲಿಕಾ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆಗೊಂಡ ನಂತರ ಆ ಶಾಲೆಗೂ ಸಹ ಉಚಿತ ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡುವುದಾಗಿ ಟ್ರಸ್ಟ್ ನ ಅಧ್ಯಕ್ಷ ಕೆ.ಸಿ.ರವೀಂದ್ರ ತಿಳಿಸಿದರು.

ಈ ವೇಳೆ ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ಎಲ್ಲಾ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಹಾಗೂ ವಿವೇಕ ಚಿಂತನ ಸೇವಾ ಸೊಸೈಟಿ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ, ಶ್ರೀ ಶಾಂತಕುಮಾರ್, ಶ್ರೀವಸಂತ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ನಾಳೆ ಗೋವುಗಳಿಗೆ ಮೇವು ವಿತರಣೆ

ಮಂಡ್ಯ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಸಂಘದಿಂದ ಮೇಲುಕೋಟೆಯ ನಂದಗೋಕುಲ ಗೋಶಾಲೆಯಲ್ಲಿ ಜು.೭ರಂದು ಬೆಳಗ್ಗೆ ೧೦.೩೫ಕ್ಕೆ ಗೋವುಗಳಿವೆ ಮೇವು ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಎಸ್.ಗೌಡ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಕಿಸಾನ್ ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ನಗರಘಟಕದ ಅಧ್ಯಕ್ಷ ವಸಂತಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಬಿಜೆಪಿ ನಗರ ಘಟಕ ಮಾಜಿ ಅಧ್ಯಕ್ಷ ಎಚ್.ಆರ್.ಅರವಿಂದ್, ಮಾದೇಗೌಡ, ನಂದಗೋಕುಲ ಗೋಶಾಲೆ ಸಂಸ್ಥಾಪಕ ಗಂಗಾನಾಥ್ ಪ್ರಭು ಭಾಗವಹಿಸುವರು ಎಂದಿದ್ದಾರೆ.