ಸಾರಾಂಶ
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಸದನದಲ್ಲಿ ಆಶ್ವಾಸನೆ ನೀಡಿದ್ದು, ಅಧಿವೇಶನ ಮುಗಿದ ಬಳಿಕ ಜಿಲ್ಲೆಗೆ ಆಗಮಿಸಿ ಈ ಕುರಿತು ಉನ್ನತ ಸಭೆ ನಡೆಸಿ ಕಾರ್ಯರೂಪಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಸದನದಲ್ಲಿ ಆಶ್ವಾಸನೆ ನೀಡಿದ್ದು, ಅಧಿವೇಶನ ಮುಗಿದ ಬಳಿಕ ಜಿಲ್ಲೆಗೆ ಆಗಮಿಸಿ ಈ ಕುರಿತು ಉನ್ನತ ಸಭೆ ನಡೆಸಿ ಕಾರ್ಯರೂಪಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು ಅವಕಾಶವಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ತಡೆಯಾಜ್ಞೆ ಇದೆ ಎಂದು ಹೇಳಿದರು.
ಮಂಗಳವಾರವೇ ಸ್ಯಾಂಡ್ ಬಝಾರ್ ಶುರು:ಈ ಹಿಂದೆ ಯು.ಟಿ. ಖಾದರ್ ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆಪ್ ಮಾಡಿ ಅದರ ಮೂಲಕ ಜನರಿಗೆ ನಿಗದಿತ ಸಮಯಕ್ಕೆ ನಿಗದಿತ ದರಕ್ಕೆ ಮರಳು ನೀಡುವ ಕೆಲಸ ಆಗಿತ್ತು. ಸರ್ಕಾರ ಬದಲಾದ ಬಳಿಕ ಸ್ಯಾಂಡ್ ಬಜಾರ್ ಆಪ್ ಬಂದ್ ಆಗಿತ್ತು. ಇದೀಗ ಮುಂಬರುವ ಮಂಗಳವಾರವೇ ಈ ಆಪ್‌ನ್ನು ಮರಳಿ ಜಾರಿಗೆ ತರಲಾಗುವುದು. ಈ ವ್ಯವಸ್ಥೆ ಬಂದ ಬಳಿಕ ಜಿಲ್ಲೆಯಲ್ಲಿ ಮರಳು ಅಭಾವ ನೀಗಲಿದೆ ಎಂದು ಐವನ್ ಡಿಸೋಜ ಹೇಳಿದರು.
ಪ್ರಮುಖರಾದ ಗುಲಾಂ ಅಹ್ಮದ್ ಹೆಜಮಾಡಿ, ನಾಗೇಂದ್ರ ಕುಮಾರ್, ಮನುರಾಜ್, ಸತೀಶ್ ಪೆಂಗಲ್, ಸಿರಾಜ್ ಅಹ್ಮದ್, ಪ್ರೇಮ್ ಬಳ್ಳಾಲ್‌ಬಾಗ್ ಇದ್ದರು.