ಸಾರಾಂಶ
ಅರಸೀಕೆರೆ: ಹಬ್ಬಹರಿದಿನಗಳ ಆಚರಣೆ ಸಮಾಜದಲ್ಲಿ ಶಾಂತಿ ಸಾಮರಸ್ಯ ಕಾಪಾಡುವಲ್ಲಿ ಜನರ ಮನಸ್ಸು, ಮನಸುಗಳನ್ನು ಬೆಸೆಯುವ ಸಾಧನವಾದಾಗ ಮಾತ್ರ ಹಬ್ಬ ಹಾಗೂ ಜಾತ್ರಾ ಮಹೋತ್ಸವಗಳ ಮೌಲ್ಯ ಹೆಚ್ಚಾಗುತ್ತದೆ ಎಂದು ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಶುಕ್ರವಾರ ಸಂಜೆ ತಿಳಿಸಿದರು.

ತಾಲೂಕಿನ ಕಣಕಟ್ಟೆ ಹೋಬಳಿ ಹೊಸಳ್ಳಿ ಗ್ರಾಮದಲ್ಲಿ ಗೌರಮ್ಮ ದೇವಿಯವರ ವಿಸರ್ಜನಾ ಮಹೋತ್ಸವದಲ್ಲಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. ರಾಜ್ಯದ ಲಕ್ಷಾಂತರ ಜನರ ಆರಾಧ್ಯ ದೇವತೆಯಾಗಿರುವ ಸ್ವರ್ಣ ಗೌರಮ್ಮನವ ದೇವಿಯವರಲ್ಲಿ ಎರಡು ಗುಂಪುಗಳಾಗಿದ್ದು, ಎರಡು ಪ್ರತ್ಯೇಕ ಗೌರಮ್ಮ ದೇವಿಯವರನ್ನು ಪ್ರತಿಷ್ಠಾಪಿಸಿ ಈಗಾಗಲೇ ವಿಸರ್ಜಿಸಿರುವುದು ಉತ್ತಮ ಬೆಳವಣಿಗೆಯಲ್ಲ, ಅದೇ ರೀತಿ ನಾಗಮಂಗಲ ದಾವಣಗೆರೆ ಶಿವಮೊಗ್ಗ ಸೇರಿದಂತೆ ಗಣಪತಿ ವಿಸರ್ಜನೆ ವೇಳೆ ಸಂದರ್ಭದಲ್ಲಿ ನಡೆದ ಘಟನಾವಳಿಗಳು ಸಮಾಜದ ಅಶಾಂತಿಗೆ ಕಾರಣವಾಗಿದ್ದು, ಅಲ್ಲದೇ ಅಪಾರ ಅವರ ಆಸ್ತಿಪಾಸ್ತಿ ನಷ್ಟವಾಗಿದ್ದು, ಎಂಥ ಕಳವಳಕಾರಿ ಸಂಗತಿಯಾಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.ಯಾವುದೇ ಹಬ್ಬ, ಹರಿದಿನಗಳ ಆಚರಣೆಯಲ್ಲಿ ಅವುಗಳ ಸಾರ ಒಂದೇ ಪರಸ್ಪರ ಕೂಡಿ ಆಚರಣೆ ಮಾಡುವುದು. ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಈ ಬಗ್ಗೆ ಯುವ ಜನತೆ ಹೆಚ್ಚಿನ ನಿಗಾ ವಹಿಸಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅಪಾರ ಭಕ್ತವೃಂದ ಪಾಲ್ಗೊಂಡಿದ್ದರು.