ಸಾರಾಂಶ
ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರ ಸರ್ಕಲ್ ಬಳಿ ಕೂಡಿಟ್ಟಿದ್ದ ಸಾಗುವಾನಿ, ಹಲಸು, ಹೊನ್ನೆ ನಾಟದ ತುಂಡುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟು ಹೋಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ಪಟ್ಟಣ ಪಂಚಾಯಿತಿ ಸದಸ್ಯ, ಜಿ.ಪಿ.ಟಿಂಬರ್ ಮಾಲೀಕ ಮುನಾವರ್ ಪಾಷಾ ಸಮೀಪದ ಜೆ.ಕೆ.ಶಾಮೀಲ್ ಮಿಲ್ಲಿನ ಪಕ್ಕದ ಜಾಗದಲ್ಲಿ ಸಾಗುವಾನಿ, ಹಲಸು ಹಾಗೂ ಹೊನ್ನೆ ನಾಟವನ್ನು ಸಂಗ್ರಹಿಸಿದ್ದರು.
- ನಾಟಾ ಮಿಲ್ಲಿನ ಪಕ್ಕದಲ್ಲಿದ್ದಲ್ಲಿ ಸಂಗ್ರಹಿಸಿದ್ದ ದಾಸ್ತಾನು । ಲಕ್ಷಾಂತರ ರುಪಾಯಿ ನಷ್ಟ
ಕನ್ನಡಪ್ರಭವಾರ್ತೆ, ನರಸಿಂಹರಾಜಪುರಪಟ್ಟಣದ ಪ್ರವಾಸಿ ಮಂದಿರ ಸರ್ಕಲ್ ಸಮೀಪದ ಜಾಗದಲ್ಲಿ ಕೂಡಿಟ್ಟಿದ್ದ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಜಿ.ಪಿ. ಟಿಂಬರ್ ಮಾಲೀಕ ಮುನಾವರ್ ಪಾಷಾ ಅವರಿಗೆ ಸೇರಿದ ಸಾಗುವಾನಿ, ಹಲಸು, ಹೊನ್ನೆ ನಾಟದ ತುಂಡುಗಳಿಗೆ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ನಾಟಾಗಳು ಸುಟ್ಟು ಹೋಗಿ ಲಕ್ಷಾಂತರ ರು. ನಷ್ಟ ಉಂಟಾದ ಘಟನೆ ನಡೆದಿದೆ.
ಪ್ರವಾಸಿ ಮಂದಿರ ಸರ್ಕಲ್ ಹತ್ತಿರದ ಜಿ.ಪಿ.ಟಿಂಬರ್ ಮಾಲೀಕ ಮುನಾವರ್ ಪಾಷಾ ಸಮೀಪದ ಜೆ.ಕೆ.ಶಾಮೀಲ್ ಮಿಲ್ಲಿನ ಪಕ್ಕದ ಜಾಗದಲ್ಲಿ ಸಾಗುವಾನಿ, ಹಲಸು ಹಾಗೂ ಹೊನ್ನೇ ನಾಟವನ್ನು ಸಂಗ್ರಹ ಮಾಡಿದ್ದಾರೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ ನಾಟಾಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅಗ್ನಿಶ್ಯಾಮಕ ದಳದವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಅಗ್ನಿ ಶ್ಯಾಮಕ ದಳದ ಠಾಣಾಧಿಕಾರಿ ಹೆನ್ರಿ ಡಿ ಸೋಜ ಹಾಗೂ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಬೆಂಕಿ ನಂದಿಸುವುದರೊಳಗೆ 20 ಮೀ. ನಷ್ಟು ಸಾಗುವಾನಿ ನಾಟ ಸುಟ್ಟು ಹೋಗಿದ್ದು 15 ರಿಂದ 16 ಲಕ್ಷ ರು. ನಷ್ಟ ಉಂಟಾಗಿದೆ ಎಂದು ಜಿ.ಪಿ.ಟೆಂಬರ್ ಮಾಲೀಕ ಮುನಾವರ್ ಪಾಷಾ ತಿಳಿಸಿದ್ದಾರೆ.ನಾಟಾ ಸಂಗ್ರಹಕ್ಕೆ ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕ ತಹಸೀಲ್ದಾರ್ ತನುಜ ಟಿ ಸವದತ್ತಿ, ಮೆಸ್ಕಾಂ ಇಂಜಿನಿಯರ್ ಗೌತಮ್, ರೆವಿನ್ಯೂ ಇನ್ಸಪೆಕ್ಟರ್ ಮಂಜುನಾಥ್, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಿಕ ವಿಜಯ ಕುಮಾರ್ ಬೇಟಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.