ಸಾರಾಂಶ
ದಾಬಸ್‌ಪೇಟೆ: ತುಮಕೂರು-ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ-48ರ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಬಳಿ ಲಾರಿ ಹಾಗೂ ಖಾಸಗಿ ಬಸ್‌ಗಳ ನಡುವೆ ಸಂಭವಿಸಿರುವ ಸರಣಿ ಅಪಘಾತದಲ್ಲಿ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಸ್ ಚಾಲಕ ಸಚಿನ್(40), ಅರಕೆರೆ ತಾಲೂಕಿನ ಬೃಂದಾನವನ ನಗರ ನಿವಾಸಿ ಶ್ರೀಕಾಂತ್ (51), ಪುತ್ರಿ ದಿವ್ಯಶ್ರೀ (19), ಹುಳಿಯಾಳ್ ನಿವಾಸಿ ಸಾಗರ್ (25), ಬೆಂಗಳೂರು ನ್ಯೂ ತಿಪ್ಪಸಂದ್ರ ನಿವಾಸಿ ದೀಪಾಮಂಜುನಾಥ್ (42), ಪುತ್ರ ರಕ್ಷಣ್(16), ಪುತ್ರಿ ನಾಗಶ್ರೀ(09), ಬೆಂಗಳೂರಿನ ಗುಟ್ಟೆಪಾಳ್ಯ ನಿವಾಸಿ ಗೌತಮಿ(35), ಕಾರವಾರ ನಿವಾಸಿ ಅನುಷಾ(26), ಧಾರವಾಡದ ಕೆಯುಡಿ ರಸ್ತೆ ನಿವಾಸಿ ಜಾಹಿದ್(29) ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.ಖಾಸಗಿ ಟ್ರಾವೆಲ್ಸ್‌ಗೆ ಸೇರಿದ ಎರಡು ಬಸ್ಸುಗಳ ನಡುವೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಬಳಿ ಹೊನ್ನಾವರದಿಂದ ಬೆಂಗಳೂರಿಗೆ ಹಾಗು ಚಿತ್ರದುರ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸುಗಳು ಮತ್ತು ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಂಟೇನರ್ ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಘಟನೆ ಹಿನ್ನೆಲೆ:ಡಿ.27ರಂದು ಬೆಳಗ್ಗೆ 6 ಗಂಟೆ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ತೊಣಚಿನಕುಪ್ಪೆ ಗ್ರಾಮದ ಬಳಿ ಮಂಜು ಆವರಿಸಿದ್ದ ಹಿನ್ನಲೆ ಲಾರಿಯೊಂದು ನಿಧಾನವಾಗಿ ಚಲಿಸುತ್ತಿದ್ದು ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಬಳಿ ಬಸ್ ಖಾಸಗಿ ಬಸ್ ಹಿಂಬದಿಯಲ್ಲಿ ಮತ್ತೊಂದು ಬಸ್ ಡಿಕ್ಕಿ ಹೊಡೆದಿದ್ದು ನಂತರ ಮತ್ತೊಂದು ಬಸ್ ಡಿಕ್ಕಿ ಹೊಡೆದುಕೊಂಡ ಸರಣಿ ಅಪಘಾತ ಸಂಭವಿಸಿದೆ.
ಸರಣಿ ಅಪಘಾತದಲ್ಲಿ ಬಸ್‌ಗಳ ಮುಂಭಾಗ ಹಾಗೂ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಆಕಸ್ಮಿಕವಾಗಿ ಸಂಭವಿಸಿದ್ದು ಅವಘಡದಲ್ಲಿ ಮೂರು ಬಸ್‌ಗಳಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕೆಲವರು ಹೆಚ್ಚಿನ ಚಿಕಿತ್ಸೆಗಾಗಿ ನೆಲಮಂಗಲದ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧನ್ವಂತರಿ ಆಸ್ಪತ್ರೆಯಲ್ಲಿ 3 ಮಂದಿ, ಕೇರ್ ಏಷ್ಯಾ ಆಸ್ಪತ್ರೆಯಲ್ಲಿ ನಾಲ್ವರು, ಮನಸ್ವಿ ಆಸ್ಪತ್ರೆಯಲ್ಲಿ 4 ಮಂದಿ, ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಮಂದಿ ಸೇರಿದಂತೆ ಉಳಿದ ಕೆಲವರು ಚಿಕಿತ್ಸೆ ಪಡೆದುಕೊಂಡು ಮನೆಗಳಿಗೆ ತೆರಳಿದ್ದಾರೆ.
ಏಳೆಂಟು ಕಿ.ಮೀ. ಟ್ರಾಫಿಕ್:ಬೆಳ್ಳಂಬೆಳ್ಳಗೆ ಬಸ್‌ಗಳ ಸರಣಿ ಅಪಘಾತ ಸಂಭವಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ-48ರ ತುಮಕೂರು-ಬೆಂಗಳೂರು ರಸ್ತೆರಲ್ಲಿ ತೊಣಚಿನಕುಪ್ಪೆಯಿಂದ ಕುಲುವನಹಳ್ಳಿವರೆಗೂ ಸುಮಾರು ಏಳೆಂಟು ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿ ಸಂಚಾರ ಪೊಲೀಸ್ ಠಾಣೆ ಅರಕ್ಷಕ ನಿರೀಕ್ಷಕ ರವಿ ನೇತೃತ್ವದ ಪೊಲೀಸ್ ಸಿಬ್ಬಂದಿ ಟ್ರಾಫಿಕ್ ನಿಯಂತ್ರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಪೋಟೋ 6&7 : ತೊಣಚಿನಕುಪ್ಪೆ ಬಳಿಯ ರಾ.ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಜಖಂಗೊಂಡಿರುವ ಬಸ್‌ಗಳು.
ಪೋಟೋ 8 : ನೆಲಮಂಗಲ ಸಾರ್ವಜನಿಕ ಆಸ್ಪತೆಯಲ್ಲಿ ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿರುವುದು.