ಸಾರಾಂಶ
ಮತ್ತೊಂದು ಕಡೆ ಬೈಕ್ ಗೆ ಡಿಕ್ಕಿ ಹೊಡೆದು ಟಾಟಾ ಏಸ್ ಚಾಲಕ ಎಸ್ಕೇಪ್ ಆಗುವ ವೇಳೆ ಅಪಘಾತ, ಟಾಟಾ ಏಸ್ ವಾಹನ ಬೆನ್ನೇರಿ ಬಂದ ಸವಾರ ದರದರನೇ ನೂರು ಮೀಟರ್ ಸಾಗಿದ ಭಯಾನಕ ದೃಶ್ಯ ಕೂಡ ಸೆರೆಯಾಗಿದೆ.
ನೆಲಮಂಗಲ: ರಸ್ತೆ ತಿರುವಿನಲ್ಲಿ ಸಿಗ್ನಲ್ ಇಂಡಿಕೇಟರ್ ಹಾಕಿ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ವೇಗವಾಗಿ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದು, ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಯುವಕರು, ಅಮಾಯಕ ಕಾರು ಚಾಲಕನಿಗೆ ಕಪಾಳಕ್ಕೆ ಹೊಡೆದು ಗಲಾಟೆ ವಾತಾವರಣ ನಿರ್ಮಿಸಿ ಎಸ್ಕೇಪ್ ಆದ ಘಟನೆ ನಗರದ ಗುರುಭವನದ ಮುಂದೆ ನಡೆದಿದೆ. ಈ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮತ್ತೊಂದು ಕಡೆ ಬೈಕ್ ಗೆ ಡಿಕ್ಕಿ ಹೊಡೆದು ಟಾಟಾ ಏಸ್ ಚಾಲಕ ಎಸ್ಕೇಪ್ ಆಗುವ ವೇಳೆ ಅಪಘಾತ, ಟಾಟಾ ಏಸ್ ವಾಹನ ಬೆನ್ನೇರಿ ಬಂದ ಸವಾರ ದರದರನೇ ನೂರು ಮೀಟರ್ ಸಾಗಿದ ಭಯಾನಕ ದೃಶ್ಯ ಕೂಡ ಸೆರೆಯಾಗಿದೆ. ಅಪಘಾತ ಮಾಡಿ ಸ್ಥಳೀಯರಿಗೆ ಆವಾಜ್ ಹಾಕಿದ ಕಾರಿನಲ್ಲಿದ್ದ ಯುವಕರ ದುರ್ವರ್ತನೆಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳೀಯರು ವಿಡಿಯೋ ಮಾಡಲು ಮುಂದಾದ ವೇಳೆ ಡಿಕ್ಕಿ ಹೊಡೆದ ಯುವಕರು ಎಸ್ಕೇಪ್ ಆಗಿದ್ದಾರೆ.