ಸಾರಾಂಶ
ಮಾಗಡಿ ಪಟ್ಟಣದಲ್ಲಿ ನಾಲ್ಕು ಕಡೆ ಕದೀಮರು ಸರಣಿ ಕಳ್ಳತನ ನಡೆಸಿದ್ದು, ಲಕ್ಷಾಂತರ ನಗದು ದೋಚಿ ಪರಾರಿಯಾಗಿದ್ದಾರೆ.
ಮಾಗಡಿ: ಪಟ್ಟಣದಲ್ಲಿ ನಾಲ್ಕು ಕಡೆ ಕದೀಮರು ಸರಣಿ ಕಳ್ಳತನ ನಡೆಸಿದ್ದು, ಲಕ್ಷಾಂತರ ನಗದು ದೋಚಿ ಪರಾರಿಯಾಗಿದ್ದಾರೆ. ಮಂಗಳವಾರ ರಾತ್ರಿ ಪಟ್ಟಣದ ಎನ್ಇಎಸ್ ಮುಖ್ಯರಸ್ತೆಯ ಜೈ ಜವಾನ್ ಜೈ ಕಿಸಾನ್ ಮೆಗಾ ಮಾರ್ಟ್ ನಲ್ಲಿ ಒಂದು ಲಕ್ಷ ನಗದು, ಬೇಕರಿಯಲ್ಲಿ 50 ಸಾವಿರ ನಗದು ಸೇರಿದಂತೆ ಸಿಗರೇಟ್ ದೋಚಿ ಪರಾರಿಯಾಗಿದ್ದಾರೆ. ಧ್ವನಿವರ್ಧಕ ಅಂಗಡಿ, ಕೇಬಲ್ ಕಚೇರಿ ಸೇರಿ ನಾಲ್ಕು ಕಡೆ ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದ್ದು 2 ಬೈಕ್ ಗಳಲ್ಲಿ ಬಂದ ಐದು ಮಂದಿ ಯುವಕರ ಗುಂಪು ಸರಣಿಗಳ್ಳತನ ಮಾಡಿದೆ. ಜನರು ಆತಂಕ ಪಡುವಂತಾಗಿದ್ದು ಕೂಡಲೇ ಪೊಲೀಸ್ ರಾತ್ರಿಯ ಗತ್ತನ್ನು ಹೆಚ್ಚಿಸಿ ಕಳ್ಳರ ಎಡೆಮುರಿ ಕಟ್ಟಬೇಕೆಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದಾರೆ.