ಸಾರಾಂಶ
ಜಮಖಂಡಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದ್ದು, ಒಂದೇ ರಾತ್ರಿ ನಾಲ್ಕು ಮನೆಗಳ ಬೀಗ ಮುರಿದು ಚಿನ್ನಾಭರಣ, ನಗದು ದೋಚಲಾಗಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ನಾಗನೂರ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದ್ದು, ಒಂದೇ ರಾತ್ರಿ ನಾಲ್ಕು ಮನೆಗಳ ಬೀಗ ಮುರಿದು ಚಿನ್ನಾಭರಣ, ನಗದು ದೋಚಲಾಗಿದೆ.ಗ್ರಾಮದ ಉಮೇಶ ಕನಮುಚ್ಚನಾಳ ಅವರ ಮನೆಯ ಲಾಕರ್ ಮುರಿದು ಮೂರು ತೊಲ ಚಿನ್ನಾಭರಣ, ಹತ್ತು ಗ್ರಾಂ, ಚಿನ್ನದ ತಾಳಿ ಸರ ಹಾಗೂ ₹15000 ನಗದು ದೋಚಿದ್ದಾರೆ. ಬಸಪ್ಪ ಚನ್ನಪ್ಪ ಗಲಗಲಿ ಅವರ ಮನೆಯ ಬೀಗ ಮುರಿದು ತಡಕಾಟ ನಡೆಸಿದ್ದಾರೆ. ಶ್ರಾವಣ ಧನಪಾಲ ಅವರ ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಡಾ, ಪ್ರಸನ್ನ ಗಲಗಲಿ ಅವರ ಋತಿಕಾ ಕ್ಲಿನಿಕ್ ಬೀಗ್ ಮುರಿದು ಕ್ಲಿನಿಕ್‌ನಲ್ಲಿದ್ದ ₹20 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಸಾಬು ಕೇದಾರಿ ಮಾಳಿ ಎಂಬುವವರ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದು, ಗ್ರಾಮದ ಹೊರವಲಯದ ಹಳ್ಳದ ಬಳಿ ಬಿಟ್ಟು ಹೋಗಿದ್ದಾರೆ. ಸಾವಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.