ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಮತ್ತು ರಾಂಪುರ ಗ್ರಾಮಗಳಲ್ಲಿ ಶುಕ್ರವಾರ ತಡರಾತ್ರಿ ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳರು ಕನ್ನ ಹಾಕಿದ್ದಾರೆ ಎನ್ನಲಾಗಿದೆ.
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಮತ್ತು ರಾಂಪುರ ಗ್ರಾಮಗಳಲ್ಲಿ ಶುಕ್ರವಾರ ತಡರಾತ್ರಿ ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳರು ಕನ್ನ ಹಾಕಿದ್ದಾರೆ ಎನ್ನಲಾಗಿದೆ.
ದೊಡ್ಡಬೆಳವಂಗಲ ಗ್ರಾಮದ ಅರಸೇಗೌಡ ಅವರ ಮನೆಯ ಬಾಗಿಲನ್ನು ಕಳ್ಳರು ಮೀಟಿದ್ದಾರೆ. ಅರಸೇಗೌಡ ಬೆಂಗಳೂರಿನಲ್ಲಿ ವಾಸವಿದ್ದಾರೆ. ರಾಂಪುರದ ನಾರಾಯಣಪ್ಪ, ಲಕ್ಷ್ಮಮ್ಮ ಹಾಗೂ ಶಾಂತಮ್ಮ ಅವರ ಮನೆ ಬಾಗಿಲುಗಳನ್ನು ಮುರಿದು ಕಳ್ಳತನ ಮಾಡಿದ್ದಾರೆ. ಈ ಎಲ್ಲ ಮನೆಗಳ ಮಾಲೀಕರು ತಮ್ಮ ಮನೆಗಳಿಗೆ ಬೀಗ ಹಾಕಿ ಪರ ಊರುಗಳಿಗೆ ಹೋಗಿದ್ದರು ಎನ್ನಲಾಗಿದ್ದು, ವೃತ್ತಿಪರ ಕಳ್ಳರೇ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಹೆಚ್ಚಾದ ಕಳ್ಳರ ಹಾವಳಿ:
ದೊಡ್ಡಬೆಳವಂಗಲ ಗ್ರಾಮದಲ್ಲಿ ಒಂದು ವಾರದ ಹಿಂದಷ್ಟೇ ಒಂದು ಅಂಗಡಿ ಬಾಗಿಲು ಮುರಿದಿದ್ದ ಕಳ್ಳರು, ಕೇವಲ ಆರು ನಿಮಿಷಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.ಬೈಕ್‌ಗಳ ಕಳವಿಗೆ ವಿಫಲ ಯತ್ನ:
ಇತ್ತೀಚೆಗೆ ದೊಡ್ಡಬೆಳವಂಗಲ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೈಕ್ ಕಳ್ಳರು ರಾತ್ರಿ ವೇಳೆ ಮನೆಗಳ ಮುಂದೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಗಳನ್ನು ಬಳಸಿ ಕದಿಯಲು ಪ್ರಯತ್ನ ಪಟ್ಟಿರುವುದು ಹಲವರ ಅನುಭವಕ್ಕೆ ಬಂದಿದೆ.