ಸಾರಾಂಶ
ಅಥಣಿ: ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡಂತೆ ಇರುವ ಅಂಗಡಿಗಳಲ್ಲಿ ರಾತ್ರಿ ವೇಳೆ ಮುಸುಕುಧಾರಿ ಕಳ್ಳನೊಬ್ಬ ಕೈಚಳಕ ಪ್ರದರ್ಶಿಸಿ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ನಡೆದಿದೆ.
ಅಥಣಿ: ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡಂತೆ ಇರುವ ಅಂಗಡಿಗಳಲ್ಲಿ ರಾತ್ರಿ ವೇಳೆ ಮುಸುಕುಧಾರಿ ಕಳ್ಳನೊಬ್ಬ ಕೈಚಳಕ ಪ್ರದರ್ಶಿಸಿ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ನಡೆದಿದೆ.
ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಜತ್ತ ರಸ್ತೆಗೆ ಹೊಂದಿಕೊಂಡ ಆಟೋ ಮೊಬೈಲ್ ಅಂಗಡಿ, ಕಿರಾಣಿ ಅಂಗಡಿ ಸೇರಿ ಒಟ್ಟು 6 ಅಂಗಡಿಗಳ ಪತ್ರಾಸ್ ಮುರಿದು ಒಳಪ್ರವೇಶಿಸಿದ ಕಳ್ಳ ಹಣ ಕದಿಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅಂಗಡಿಕಾರರು ಅಥಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಥಣಿ ಪೊಲೀಸರು ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.