ಸಾರಾಂಶ
ಕೋಲಾರ ನಗರದಲ್ಲಿ ಮಂಗಳವಾರ ರಾತ್ರಿ ಕಳ್ಳರ ೭ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟು, ಮೆಡಿಕಲ್ ಶಾಪ್, ಮಾರ್ಟ್‌ಗಳಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
7ಕ್ಕೂ ಹೆಚ್ಚು ಅಂಗಡಿ, ಮೆಡಿಕಲ್ ಶಾಪ್, ಮಾರ್ಟ್‌ಗಳಲ್ಲಿ ಕಳವು । ಕಳ್ಳರ ಬಂಧನಕ್ಕೆ ಸಾರ್ವಜನಿಕರ ಆಗ್ರಹ
ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ ಮಂಗಳವಾರ ರಾತ್ರಿ ಕಳ್ಳರ ೭ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟು, ಮೆಡಿಕಲ್ ಶಾಪ್, ಮಾರ್ಟ್‌ಗಳಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ನಗರದ ಡೂಂ ಲೈಟ್ ವೃತ್ತ, ಪಿ.ಸಿ ಬಡಾವಣೆ ಮುಖ್ಯರಸ್ತೆಯಲ್ಲಿರುವ ಅಂಗಡಿ-ಮುಂಗಟ್ಟುಗಳಲ್ಲಿ ಶೆಟರ್ ಮುರಿದು ಸರಣಿ ಕಳವು ಮಾಡಲಾಗಿದೆ. ಅಪೊಲೊ ಮೆಡಿಕಲ್ಸ್, ಮೆಡ್ ಪ್ಲಸ್, ಸೇರಿ ದಿನಸಿ ಸಾಮಗ್ರಿ ಮಾರ್ಟ್‌ಗಳಲ್ಲಿ ಕಳವು ಮಾಡಿರುವ ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.ರಾಡ್‌ನಿಂದ ಮುಂಭಾಗದ ಬಾಗಿಲು ಒಡೆದು ಕಳವು ಮಾಡಿರುವ ಕಳ್ಳರು, ಮೆಡ್ ಪ್ಲಸ್ ಮಳಿಗೆಯಲ್ಲಿದ್ದ ೫೦ ಸಾವಿರ ರು. , ಅಪೊಲೊ ಮಡಿಕಲ್ಸ್‌ನಲ್ಲಿದ್ದ ೧೧ ಸಾವಿರ ರು. ಕಳವು ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ದಿನಸಿ ಮಾರ್ಟ್‌ಗಳ ಕ್ಯಾಶ್ ಬಾಕ್ಸ್‌ನಲ್ಲಿದ್ದ ಸಾವಿರಾರು ರು. ಕಳವು ಮಾಡಿ ಪರಾರಿಯಾಗಿರುವ ಆರೋಪಿಗಳು ಬಳಿಕ ಡೂಂಲೈಟ್ ವೃತ್ತ, ಪಿ.ಸಿ. ಬಡಾವಣೆ ಮುಖ್ಯರಸ್ತೆಯ ಒಟ್ಟು ೭ ಮಳಿಗೆಗಳಲ್ಲಿ ಕಳ್ಳತನ ಮಾಡಿದ್ದಾರೆ.
ನಗರದಲ್ಲಿ ಆತಂಕ ಮೂಡಿದೆ. ಸ್ಥಳಕ್ಕೆ ಕೋಲಾರ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಬೆರಳಚ್ಚು ತಂಡ ಹಾಗೂ ಶ್ವಾನ ದಳ ಸಿಬ್ಬಂದಿ ಕಳ್ಳರ ಹುಟುಕಾಟಕ್ಕೆ ಮುಂದಾಗಿದ್ದಾರೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚುವ ಮೂಲಕ ಕೋಲಾರ ನಗರ ಜನರ ಆತಂಕವನ್ನು ದೂರ ಮಾಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.