ಸಾರಾಂಶ
ಸೈನಿಕರು, ರೈತರು, ಸಾಧುಸಂತರು ನಿಸ್ವಾರ್ಥ ಸೇವೆಯಿಂದ ಇಂದು ದೇಶ ಸುಖವಾಗಿದೆ ಎಂದು ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸೈನಿಕರು, ರೈತರು, ಸಾಧುಸಂತರು ನಿಸ್ವಾರ್ಥ ಸೇವೆಯಿಂದ ಇಂದು ದೇಶ ಸುಖವಾಗಿದೆ ಎಂದು ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು ಹೇಳಿದರು.ಬೆಳಗಾವಿ ತಾಲೂಕಿನ ಹಲಗಾದ ಬಸ್ತಿ ಗಲ್ಲಿಯ ವಾರ್ಶ್ವನಾಥ ಭವನದಲ್ಲಿ ಭಾನುವಾರ ನಡೆದ ಎಸ್‌ಎಸ್‌ಎಸ್ ಸಮಿತಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಅಂತಹ ಮಹನೀಯರ ತ್ಯಾಗದ ದುಡಿಮೆ ಅರಿತುಕೊಂಡು ಇಂತಹ ಶಿಬಿರಗಳ ಮುಖಾಂತರ ಶಿಬಿರಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಿಬಿರ ಉದ್ಘಾಟಿಸಿದ ಮಾಳಮಾರುತಿ ಠಾಣೆ ಇನ್ಸಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಮಾತನಾಡಿ, ದೇಹ ಮತ್ತು ಮನಸ್ಸು ಸದೃಢವಾಗಿದ್ದರೆ ಮನುಷ್ಯ ತನ್ನ ಜೀವನದ ಎಲ್ಲಾ ಹಂತಗಳಲ್ಲಿ ಎನೂ ಬೇಕಾದರು ಸಾಧಿಸಬಹುದು. ಆ ನಿಟ್ಟಿನಲ್ಲಿ, ಎನ್.ಎಸ್.ಎಸ್. ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.ಪ್ರಾಂಶುಪಾಲೆ ಪ್ರೊ. ನಿರ್ಮಲಾ ಐ ಗಡಾದ ಅಧ್ಯಕ್ಷತೆ ವಹಿಸಿದ್ದರು. ಚಾರುಕೀರ್ತಿ ಸೈಬಣ್ಣವರ, ಗ್ರಾಪಂ ಉಪಾಧ್ಯಕ್ಷ ಭುಜಂಗ ನಾರಾಯಣ ಸಾಲಗುಡೆ, ಜೈಲಬಸ್ತಿ ಆಡಳಿತ ಮಂಡಳಿ ಉಪಾಧ್ಯಕ್ಷ ಸುಕುಮಾರ ಹುಡೇದ, ಗ್ರಾಪಂ ಸದಸ್ಯ ಸದಾನಂದ ಬಸವಂತ ಬಿಳಗೋಜಿ, ಬಾಬು ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು. ಬಿ.ಎಸ್.ಪಾಟೀಲ ಸ್ವಾಗತಿಸಿದರು. ರವಿ ದಂಡಗಿ ವಂದಿಸಿದರು. ಅನುರಾಧಾ ಕಂಚಿ ನಿರೂಪಿಸಿದರು.