ಸೇವೆಯೇ ಲಯನ್ಸ್ ಸಂಸ್ಥೆಯ ಮೂಲ ಉದ್ದೇಶ: ವಿಜಯಕುಮಾರ್

| Published : Apr 28 2025, 12:46 AM IST

ಸೇವೆಯೇ ಲಯನ್ಸ್ ಸಂಸ್ಥೆಯ ಮೂಲ ಉದ್ದೇಶ: ವಿಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಸಾಮಾಜಿಕ ಚಟುವಟಿಕೆ ಹಾಗೂ ಜನರ ಸೇವೆ ಲಯನ್ಸ್ ಸಂಸ್ಥೆ ಮೂಲ ಉದ್ದೇಶವಾಗಿದೆ ಎಂದು ಲಯನ್ಸ್ ಕ್ಲಬ್ ಬೆಂಗಳೂರು ವಲಯಾಧ್ಯಕ್ಷ ವಿಜಯಕುಮಾರ್ ಹೇಳಿದರು.

ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬೆಂಗಳೂರಿನ ಹಾಗೂ ಸ್ಥಳೀಯ ಕ್ಲಬ್ ಕ್ಲಬ್‌ಗಳ ಸಮ್ಮಿಲನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಾಮಾಜಿಕ ಚಟುವಟಿಕೆ ಹಾಗೂ ಜನರ ಸೇವೆ ಲಯನ್ಸ್ ಸಂಸ್ಥೆ ಮೂಲ ಉದ್ದೇಶವಾಗಿದೆ ಎಂದು ಲಯನ್ಸ್ ಕ್ಲಬ್ ಬೆಂಗಳೂರು ವಲಯಾಧ್ಯಕ್ಷ ವಿಜಯಕುಮಾರ್ ಹೇಳಿದರು.ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬೆಂಗಳೂರಿನ ವಿವಿಧ ಲಯನ್ಸ್ ಕ್ಲಬ್ ಹಾಗೂ ಸ್ಥಳೀಯ ಕ್ಲಬ್ ಆಯೋಜಿಸಿದ್ದ ಅವಳಿ ಕ್ಲಬ್‌ಗಳ ಸಮ್ಮಿಲನ (ಟ್ವಿನ್ನಿಂಗ್ ಪ್ರೋಗ್ರಾಮ್) ಕಾರ್ಯಕ್ರಮದಲ್ಲಿ ಮಾತನಾಡಿದರು. ಲಯನ್ಸ್ ಸಂಸ್ಥೆಯಲ್ಲಿ ವಿವಿಧ ವಲಯದ ಕ್ಲಬ್‌ಗಳ ಟ್ವಿನ್ನಿಂಗ್ ಕಾರ್ಯಕ್ರಮವನ್ನು ಹಲವು ಕಡೆಗಳಲ್ಲಿ ನಡೆಸುತ್ತಿದ್ದು, ಈ ಬಾರಿ ಲಯನ್ಸ್ ಜಿಲ್ಲೆ 317 ಡಿ ಮತ್ತು 317 ಎಫ್‌ನ ವಿವಿಧ ಕ್ಲಬ್‌ಗಳು ಒಗ್ಗೂಡಿ ಸಾಮಾಜಿಕ ಚಟುವಟಿಕೆಗಳನ್ನು ಒಂದೆಡೆ ನಡೆಸುತ್ತಿದೆ ಎಂದರು.

ಎರಡೂ ಕ್ಲಬ್‌ಗಳು ಒಗ್ಗೂಡಿ ಸಭೆ ನಡೆಸಿ ಲಯನ್ಸ್ ವರ್ಷದಲ್ಲಿ ಆಯಾ ಕ್ಲಬ್‌ಗಳು ನಡೆಸುವ ಕಾರ್ಯಕ್ರಮಗಳ ಮಾಹಿತಿ ವಿನಿಮಯ ಮಾಡಿಕೊಂಡು, ಒಂದು ಕ್ಲಬ್ ನಡೆಸಿರುವ ಉತ್ತಮ ಕಾರ್ಯಕ್ರಮವನ್ನು ಮತ್ತೊಂದು ಕ್ಲಬ್ ನಡೆಸುವಂತೆ ಸಲಹೆ ನೀಡಲಾಗುವುದು ಎಮದು ತಿಳಿಸಿದರು.ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಆಯಾ ಪ್ರಾಂತ್ಯದ ಕಾರ್ಯ ಚಟುವಟಿಕೆಗಳನ್ನು ಬೇರೆ ಕಡೆಗಳಲ್ಲಿ ವಿಸ್ತರಿಸಿ ಕೊಳ್ಳಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಬಾಳೆಹೊನ್ನೂರು ಕ್ಲಬ್ಬನ್ನು ಬೆಂಗಳೂರಿಗೆ ಆಹ್ವಾನಿಸಿ ಅಲ್ಲಿಯೂ ಸಾಮಾಜಿಕ ಚಟುವಟಿಕೆ ನಡೆಸಲಾಗುವುದು ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿ. ಶ್ರೀನಿವಾಸಗೌಡ ಮಾತನಾಡಿ, ಅವಳಿ ಕ್ಲಬ್‌ಗಳ ಸಮ್ಮಿಲನದಲ್ಲಿ ಈ ದಿನ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹24 ಸಾವಿರ ಮೌಲ್ಯದಲ್ಲಿ 40 ಚೇರ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಇತ್ತೀಚೆಗೆ ಮಳೆ ಗಾಳಿಗೆ ಮನೆ ಮೇಲೆ ಮರ ಬಿದ್ದು ಹಾನಿಯಾದ ಬಿಂತ್ರವಳ್ಳಿಯ ಸತೀಶ್ ಅವರ ಕುಟುಂಬಕ್ಕೆ ₹15 ಸಾವಿರ ಧನ ಸಹಾಯ ನೀಡಲಾಗಿದೆ.ಮುಂದಿನ ದಿನಗಳಲ್ಲಿಯೂ ಇಂತಹ ಹಲವು ಸಾಮಾಜಿಕ ಚಟುವಟಿಕೆ ವಿವಿಧ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.ಅವಳಿ ಕ್ಲಬ್‌ಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಲಯನ್ಸ್ ಕ್ಲಬ್, ಬೆಂಗಳೂರು ಫೇಮ್ ಲಯನ್ಸ್ ಕ್ಲಬ್, ಬೆಂಗಳೂರು ಯಶಸ್ ಲಯನ್ಸ್ ಕ್ಲಬ್ ಹಾಗೂ ಬೆಂಗಳೂರು ವಿಜಯನಗರ ಲಯನ್ಸ್ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು.ಬೆಂಗಳೂರು ಫೇಮ್ ಲಯನ್ಸ್ ಅಧ್ಯಕ್ಷ ಗಿರೀಶ್ ಅಲಗೇಶ್ವರ, ನವೀನ್ ಕಾವಲ್, ಗೋಪಾಲ್ ವಿಜಯನಗರ, ಸ್ಥಳೀಯ ಲಯನ್ಸ್ ಕಾರ್ಯದರ್ಶಿ ಎಂ.ನಾರಾಯಣ ಮೇಲ್ಪಾಲ್, ಖಜಾಂಚಿ ಶರತ್‌ಕುಮಾರ್, ಸದಸ್ಯರಾದ ಎಂ.ಡಿ.ಶಿವರಾಮ್, ಎನ್.ಸುಬ್ರಮಣ್ಯ, ಎಚ್.ಜೆ.ವಿಕ್ರಮ್, ಸುರೇಂದ್ರ, ಸುಧಾಕರ್, ಯೋಗೀಶ್ ಬನ್ನೂರು, ಉಪೇಂದ್ರ ಮತ್ತಿತರರು ಹಾಜರಿದ್ದರು.೨೭ಬಿಹೆಚ್‌ಆರ್ ೨:

ಬಾಳೆಹೊನ್ನೂರು ಲಯನ್ಸ್ ಸಭಾಂಗಣದಲ್ಲಿ ಬೆಂಗಳೂರಿನ ವಿವಿಧ ಲಯನ್ಸ್ ಕ್ಲಬ್ ಹಾಗೂ ಸ್ಥಳೀಯ ಕ್ಲಬ್ ಆಯೋಜಿಸಿದ್ದ ಅವಳಿ ಕ್ಲಬ್‌ಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು. ವಿಜಯಕುಮಾರ್, ಎಂ.ವಿ.ಶ್ರೀನಿವಾಶ್, ಗಿರೀಶ್, ಎಂ.ನಾರಾಯಣ, ನವೀನ್, ಗೋಪಾಲ್, ಶರತ್‌ಕುಮಾರ್ ಇದ್ದರು.