ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಸೇವೆ ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆ: ವಿ.ಕೆ.ಜಗದೀಶ್

| Published : Oct 22 2025, 01:03 AM IST

ಸಾರಾಂಶ

ಸೇವೆಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಸೇವಾ ಸಂಸ್ಥೆಗಳ ಪೈಕಿ ಲಯನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿದೆ. ಸಂಸ್ಥೆ ಸೇರಿದರೆ ಲಾಭ ಮಾಡಬಹುದೆಂಬ ಹೊರತಾದ ವ್ಯಕ್ತಿಗಳು ಸೇವೆ ಮಾಡುವ ಮನೋಭಾವದಿಂದ ಮಾತ್ರ ಲಯನ್ಸ್ ಸಂಸ್ಥೆಗೆ ಸೇರಬಹುದು.

ಕನ್ನಡಪ್ರಭ ವಾರ್ತೆ ಮದ್ದೂರು

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವವರಿಗೆ ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆ ಎಂದು ಸಂಸ್ಥೆ ಜಿಲ್ಲಾ ಅತಿಥಿ

ವಿ.ಕೆ.ಜಗದೀಶ್ ಹೇಳಿದರು.

ಪಟ್ಟಣದ ಮದ್ದೂರು ಕ್ರೀಡಾ ಬಳಗದಲ್ಲಿ ಮದ್ದೂರು ಲಯನ್ಸ್ ಸಂಸ್ಥೆ ವತಿಯಿಂದ ಶಿಕ್ಷಕರ ಮತ್ತು ಇಂಜಿನಿಯರ್ ದಿನಾಚರಣೆ ಅಂಗವಾಗಿ ವಳಗೆರೆದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜಿ. ಬಿ.ಶಿಲ್ಪಶ್ರೀ ಹಾಗೂ ಅಭಿಯಂತರ ಆರ್. ಪ್ರದೀಪ್ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಸೇವೆಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಸೇವಾ ಸಂಸ್ಥೆಗಳ ಪೈಕಿ ಲಯನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿದೆ. ಸಂಸ್ಥೆ ಸೇರಿದರೆ ಲಾಭ ಮಾಡಬಹುದೆಂಬ ಹೊರತಾದ ವ್ಯಕ್ತಿಗಳು ಸೇವೆ ಮಾಡುವ ಮನೋಭಾವದಿಂದ ಮಾತ್ರ ಲಯನ್ಸ್ ಸಂಸ್ಥೆಗೆ ಸೇರಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಲಿಂಗನದೊಡ್ಡಿ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಬಿ.ಯೋಗ, ಖಜಾಂಚಿ ಸಿದ್ದಯ್ಯ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಸುನೀಲ್ ಕುಮಾರ್, ಎಲ್. ಸಿ.ಐ.ಎಪ್. ನ ಸಂಯೋಜಕ ಎಸ್.ಪಿ.ಆದರ್ಶ, ವಲಯಾಧ್ಯಕ್ಷ ಆರ್. ಕೆಂಗಲ್ ಗೌಡ ಹಾಗೂ ಸದಸ್ಯರು ಭಾಗವಹಿಸಿದ್ದರು.