ಸಾರಾಂಶ
ಸೇವೆ ಮಾಡುವವರು ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಗ ಸೇವೆ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು. ನಮ್ಮ ತಂದೆ ದಿ. ಜಿಮಾದೇಗೌಡರು ತಮ್ಮ ಜೀವಿತ ಅವಧಿಯಲ್ಲಿ ಸಾರ್ವಜನಿಕರ ಸೇವೆಗಾಗಿಯೇ ದುಡಿದಿದ್ದಾರೆ. ಹಾಗಾಗಿ ಅವರ ಹೆಸರು ಮಂಡ್ಯ ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ. ನಾನು ಮತ್ತು ನನ್ನ ಪುತ್ರ ಆಶಯ್ ನಡೆಯುತ್ತಿದ್ದೇವೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ರಾಜಕೀಯಕ್ಕಾಗಿ ಸೇವೆ ಮಾಡಬಾರದು. ಜನರ ಸೇವೆ, ಅಭಿವೃದ್ಧಿಯೇ ರಾಜಕಾರಣಿಗಳ ಗುರಿಯಾಗಬೇಕು ಎಂದು ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.ಮುಡೀನಹಳ್ಳಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪ್ರಸ್ತುತ ಕೆಲವರು ಜನರನ್ನು ದಿಕ್ಕು ತಪ್ಪಿಸಿ ರಾಜಕಾರಣವನ್ನೆ ಗುರಿಯಾಗಿಸಿಕೊಂಡು ಹಲವು ಆಶ್ವಾಸನೆ ನೀಡಿ ಆಮಿಷ ನೀಡುತ್ತಿದ್ದಾರೆ. ಇಂತಹವರ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಸೇವೆ ಮಾಡುವವರು ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಗ ಸೇವೆ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು. ನಮ್ಮ ತಂದೆ ದಿ. ಜಿಮಾದೇಗೌಡರು ತಮ್ಮ ಜೀವಿತ ಅವಧಿಯಲ್ಲಿ ಸಾರ್ವಜನಿಕರ ಸೇವೆಗಾಗಿಯೇ ದುಡಿದಿದ್ದಾರೆ. ಹಾಗಾಗಿ ಅವರ ಹೆಸರು ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ. ನಾನು ಮತ್ತು ನನ್ನ ಪುತ್ರ ಆಶಯ್ ನಡೆಯುತ್ತಿದ್ದೇವೆಂದು ತಿಳಿಸಿದರು.ಕ್ಷೇತ್ರದ ಜನರ ಸಹಕಾರದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ನಮ್ಮ ಕುಟುಂಬ ನಿಮ್ಮೊಂದಿಗೆ ಇರುತ್ತದೆ. ಈಗಾಗಲೇ ನಮ್ಮ ಪುತ್ರ ಆಶಯ್ ಪ್ರತಿ ಗ್ರಾಮದ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ. ನಮಗೆ ತೋರಿಸುತ್ತಿರುವ ಪ್ರೀತಿ ಮುಂದೆಯೂ ಇದೇ ರೀತಿ ಇರಲಿ ಎಂದು ಕೋರಿದರು.ಅಧಿಕಾರ ಇಲ್ಲದಿದ್ದಾಗಲೂ ಪ್ರತಿಯೊಂದು ಗ್ರಾಮದ ಜನರ ಕಷ್ಟ-ಸುಖಗಳಿಗೆ ಭಾಗಿಯಾಗಿದ್ದೇನೆ. ತನ್ನ ಅಧಿಕಾರಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯನಿರ್ವಹಿದ್ದೇನೆ. ಹಣ ಬಿಡುಗಡೆಗೊಳಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇನೆ. ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದರು.
ಇದೇ ವೇಳೆ ಗ್ರಾಮಸ್ಥರು ಶಾಸಕ ಮಧು ಜಿ.ಮಾದೇಗೌಡರನ್ನು ಅಭಿನಂದಿಸಿ ಗೌರವಿಸಿದರು. ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಭರತೇಶ್, ಹಾಗಲಹಳ್ಳಿ ಬಸವರಾಜೇಗೌಡ, ಅಣ್ಣೂರು ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್‌ಚಂದ್ರ, ಕಬ್ಬಾಳಯ್ಯ, ಮುಡೀನಹಳ್ಳಿ ಗುತ್ತಿಗೆದಾರ ಅಪ್ಪಾಜಿ, ರಂಗಸ್ವಾಮಿ, ವಿಶ್ವ, ಪುಟ್ಟಸ್ವಾಮಿ, ಭಾನುಪ್ರಕಾಶ್, ಮಹೇಶ್, ಸೇರಿದಂತೆ ಹಲವರಿದ್ದರು.