ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಅವಶ್ಯ

| Published : Jun 21 2024, 01:04 AM IST

ಸಾರಾಂಶ

ಹೊಸಕೋಟೆ: ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರ ಅವಿರತ ಶ್ರಮಿಸುತ್ತಿದ್ದರೂ ದೇಶದಲ್ಲಿ ಸರ್ಕಾರದ ಪಾಲು ಶೇ.40ರಷ್ಟಿದ್ದು, ಸರ್ಕಾರದ ಜೊತೆ ಖಾಸಗಿ ಆಸ್ಪತ್ರೆಗಳ ಪಾಲು ಶೇ.60ರಷ್ಟಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ಹೊಸಕೋಟೆ: ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರ ಅವಿರತ ಶ್ರಮಿಸುತ್ತಿದ್ದರೂ ದೇಶದಲ್ಲಿ ಸರ್ಕಾರದ ಪಾಲು ಶೇ.40ರಷ್ಟಿದ್ದು, ಸರ್ಕಾರದ ಜೊತೆ ಖಾಸಗಿ ಆಸ್ಪತ್ರೆಗಳ ಪಾಲು ಶೇ.60ರಷ್ಟಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಟೋಲ್ ಬಳಿ ಸ್ಪರ್ಶ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯರು ಸೇವಾ ಮನೋಭಾವ ಹೊತ್ತು ಕೆಲಸ ಮಾಡಬೇಕು.ಆಸ್ಪತ್ರೆಗೆ ಬರುವ ರೋಗಿಗಳ ಸಮಸ್ಯೆಯನ್ನು ಅರಿತು ಅಗತ್ಯ ಚಿಕಿತ್ಸೆ ಕೊಡುವ ಕೆಲಸ ಎಲ್ಲಾ ವೈದ್ಯರಿಂದ ಆಗಬೇಕು. ಹೊಸಕೋಟೆ-ತಿರುಪತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುವ ಉದ್ದೇಶದಿಂದ ನಗರಕ್ಕೆ ಆಸ್ಪತ್ರೆಗಳ ಅವಶ್ಯಕತೆ ಹೆಚ್ಚಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತನಾಡಿ, ವೈದ್ಯಕೀಯ ಸೇವೆ ಎನ್ನುವುದು ಮಾಡುವ ಸಾಕಷ್ಟು ಸೇವೆಗಳಲ್ಲಿ ಮಹತ್ವದ ಸೇವೆಯಾಗಿದೆ. ಆದ್ದರಿಂದ ಡಾ.ವರದರಾಜು ಅವರು ತಾಲೂಕಿನಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ಜನಾನುರಾಗಿ ಕೆಲಸ ಮಾಡಿದ್ಧಾರೆ. ಆದ್ದರಿಂದ ಹೊಸ ಆಸ್ಪತ್ರೆ ಮೂಲಕ ಜನಾನುರಾಗಿ ಮತ್ತಷ್ಟು ಸೇವೆ ಮಾಡಲಿ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಮಾಲೂರು ಮಾಜಿ ಶಾಸಕರಾದ ಮಂಜುನಾಥಗೌಡ, ನಾಗರಾಜು ಆಸ್ಪತ್ರೆಗೆ ಭೇಟಿ ನೀಡಿ ಶುಭಹಾರೈಸಿದರು.

ಸ್ಪರ್ಶ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ವರದರಾಜು, ಡಾ.ಶೀತಶ್ರೀ, ನಗರಸಭೆ ಸದಸ್ಯ ಕೆ.ದೇವರಾಜ್, ನವೀನ್, ಟೌನ್ ಬ್ಯಾಂಕ್ ನಿರ್ದೇಶಕ ಬಾಲಚಂದ್ರ, ನಾಡಪ್ರಭು ಒಕ್ಕಲಿಗರ ಸಂಘದ ಸಂಘಟನಾ ಕಾರ್ಯದರ್ಶಿ ಸೊಣ್ಣೇಗೌಡ, ಆಸ್ಪತ್ರೆಯ ಮುಖ್ಯಸ್ಥ ದಿಲೀಪ್ ಇತರರು ಹಾಜರಿದ್ದರು.

ಫೋಟೋ: 20 ಹೆಚ್‌ಎಸ್‌ಕೆ 1

ಹೊಸಕೋಟೆ ಟೋಲ್ ಬಳಿ ಸ್ಪರ್ಶ ಆಸ್ಪತ್ರೆಯನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಉದ್ಘಾಟಿಸಿದರು.